ದುಬೈ: ಇರಾನ್ನ ಪರಮಾಣು ಘಟಕಗಳು ಮತ್ತು ಸೇನಾ ನೆಲೆಗಳನ್ನು ಗುರಿಯಾಗಿಸಿ ಇಸ್ರೇಲ್ ಸೇನೆ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಮತ್ತೆ ಮೂವರು ಪರಮಾಣು ವಿಜ್ಞಾನಿಗಳು ಮೃತಪಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮೃತ ವಿಜ್ಞಾನಿಗಳನ್ನು ಅಲಿ ಬಕೈ ಕರಿಮಿ, ಮನ್ಸೂರ್ ಅಸ್ಗರಿ ಮತ್ತು ಸಯೀದ್ ಬೋರ್ಜಿ ಎಂದು ಗುರುತಿಸಲಾಗಿದೆ ಎಂದು ಇರಾನ್ ಮಾಧ್ಯಮಗಳು ತಿಳಿಸಿವೆ.

‘ಆಪರೇಷನ್ ರೈಸಿಂಗ್ ಲಯನ್’ ಹೆಸರಿನಡಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಯಲ್ಲಿ ಇರಾನ್ ಸೇನೆಯ ಅತ್ಯುನ್ನತ ಶ್ರೇಣಿಯ ಅಧಿಕಾರಿ, ಸಶಸ್ತ್ರ ಪಡೆಗಳ ಮುಖ್ಯಸ್ಥ ಮೊಹಮ್ಮದ್ ಬಘೇರಿ ಮತ್ತು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ಮುಖ್ಯಸ್ಥ ಹುಸೇನ್ ಸಲಾಮಿ ಅವರು ಶುಕ್ರವಾರ ಮೃತಪಟ್ಟಿದ್ದರು.

ಐಆರ್ಜಿಸಿಯ ಗುರಿ ನಿರ್ದೇಶಿತ ಕ್ಷಿಪಣಿ ಯೋಜನೆಯ ಮುಖ್ಯಸ್ಥ ಅಮೀರ್ ಅಲಿ ಹಾಜಿಝದಾ ಅವರೂ ಮೃತಪಟ್ಟಿದ್ದರು. ಈ ಮೂವರ ಸಾವನ್ನು ಇರಾನ್ ದೃಢಪಡಿಸಿತ್ತು. ಇರಾನ್ ಪರಮಾಣು ಯೋಜನೆಯಲ್ಲಿ ಭಾಗಿಯಾಗಿರುವ ಹಲವು ವಿಜ್ಞಾನಿಗಳೂ ದಾಳಿಯಲ್ಲಿ ಮೃತಪಟ್ಟಿದ್ದಾರೆ.

ಈ ದಾಳಿಗೆ ಪ್ರತ್ಯುತ್ತರವಾಗಿ ಇಸ್ರೇಲ್ ಅನ್ನು ‘ಕಠಿಣ ಶಿಕ್ಷೆ’ಗೆ ಗುರಿಪಡಿಸಲಾಗುವುದು ಎಂದು ಇರಾನ್ನ ಪರಮೋಚ್ಚ ನಾಯಕ ಆಯಾತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. ಇದರ ಬೆನ್ನಲ್ಲೇ ಇರಾನ್ ಸೇನೆ ಇಸ್ರೇಲ್ನತ್ತ ಹಲವು ಡ್ರೋನ್ಗಳನ್ನು ಹಾರಿಸಿದೆ.
.ಇಸ್ರೇಲ್ ದಾಳಿಗೆ ಇರಾನ್ ಪ್ರತಿರೋಧ: ಟೆಲ್ ಅವಿವ್, ಜೆರುಸಲೆಮ್ ಮೇಲೆ ಕ್ಷಿಪಣಿ ದಾಳಿ.ದೇಶದೊಳಗೆ ಅನುಮಾನಾಸ್ಪದ ಚಟುವಟಿಕೆ ಕಂಡರೆ ಸೇನೆಗೆ ತಿಳಿಸುವಂತೆ ಕೋರಿದ ಇರಾನ್ .ಇಸ್ರೇಲ್ ದಾಳಿಯಲ್ಲಿ 78 ಮಂದಿ ಸಾವು, 320ಕ್ಕೂ ಹೆಚ್ಚು ಜನರಿಗೆ ಗಾಯ: ಇರಾನ್ .ಶಸ್ತ್ರಾಸ್ತ್ರ ಸಾಗಿಸಿದ್ದ ಮೊಸಾದ್: ಡ್ರೋನ್ ಬಳಸಿ ಇರಾನ್ನಲ್ಲೇ ದಾಳಿಗೆ ತಂತ್ರ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.