ಟೆಹರಾನ್: ಇಸ್ರೇಲ್ ವಿರುದ್ಧ ಯುದ್ಧದ ಬಳಿಕ ಇದೇ ಮೊದಲ ಬಾರಿಗೆ ಇರಾನ್ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

ಇಸ್ರೇಲ್ ಹಾಗೂ ಇರಾನ್ ನಡುವಣ ಯುದ್ಧ 12 ದಿನಗಳ ಕಾಲ ನಡೆದಿತ್ತು. ಈ ಮಧ್ಯೆ ಇರಾನ್ನ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕ ಬಾಂಬ್ ದಾಳಿ ನಡೆಸಿತ್ತು.

ಯುದ್ಧದ ಸಂದರ್ಭದಲ್ಲಿ ಇರಾನ್ನ ಪರಮೋಚ್ಛ ನಾಯಕರು ಬಂಕರ್ನಲ್ಲಿ ಅಜ್ಞಾತ ವಾಸದಲ್ಲಿದ್ದರು ಎನ್ನಲಾಗಿದೆ.

ಅಶುರಾ ಹಬ್ಬದ ಮುನ್ನಾದಿನದಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಖಮೇನಿ ಭಾಗವಹಿಸಿದ್ದಾರೆ. ಈ ಸಮಾರಂಭವು 7ನೇ ಶಮಾತನದ ಪ್ರವಾದಿ ಮುಹಮ್ಮದ್ ಹುಸೇನ್ ಅವರ ಮೊಮ್ಮಗ ಹುಸೇನ್ ಹುತಾತ್ಮರಾಗಿದ್ದ ಸ್ಮರಣಾರ್ಥವಾಗಿ ಏರ್ಪಡಿಸಲಾಗಿತ್ತು.

ಇರಾನ್ನ ಸರ್ಕಾರಿ ಮಾಧ್ಯಮದಲ್ಲಿ ಈ ಸಂಬಂಧ ವಿಡಿಯೊ ಪ್ರಸಾರ ಮಾಡಲಾಗಿದ್ದು, ವ್ಯಾಪಕವಾಗಿ ಹರಿದಾಡಿವೆ.

ಇರಾನ್ನ ರಾಜಧಾನಿ ಟೆಹರಾನ್ನಲ್ಲಿರುವ ತಮ್ಮ ಕಚೇರಿ ಹಾಗೂ ನಿವಾಸದ ಸಮೀಪದಲ್ಲಿರುವ ಮಸೀದಿಗೆ ಆಗಮಿಸಿರುವ ಖಮೇನಿ ಜನಸಮೂಹದತ್ತ ಕೈಬೀಸಿದ್ದಾರೆ. ಈ ವೇಳೆ ನೆರೆದಿದ್ದವರು ಜಯುಘೋಷವನ್ನು ಕೂಗಿದ್ದಾರೆ.

ಭಾರಿ ಭದ್ರತೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಖಮೇನಿ ಸಾರ್ವಜನಿಕ ಹೇಳಿಕೆ ಕುರಿತು ತಕ್ಷಣಕ್ಕೆ ವರದಿ ಬಂದಿಲ್ಲ. ಇರಾನ್ ಸಂಸತ್ತಿನ ಸ್ಪೀಕರ್ ಕೂಡ ಉಪಸ್ಥಿತರಿದ್ದರು ಎಂದು ತಿಳಿದು ಬಂದಿದೆ.

ಇರಾನ್ನ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ 86 ವರ್ಷದ ಖಮೇನಿ ಎಲ್ಲಿ ಅಡಗಿದ್ದಾರೆ ಎಂಬುದು ಗೊತ್ತಿದೆ. ಆದರೆ ತಕ್ಷಣಕ್ಕೆ ಹತ್ಯೆ ಮಾಡುವ ಇರಾದೆಯಿಲ್ಲ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಮತ್ತೊಂದೆಡೆ ಇರಾನ್ ತಂಟೆಗೆ ಬಂದರೆ ತಕ್ಕ ತಿರುಗೇಟು ನೀಡುವುದಾಗಿ ಖಮೇನಿ ಎಚ್ಚರಿಸಿದ್ದರು.

ಇಸ್ರೇಲ್ ವಿರುದ್ಧದ ಯುದ್ಧದಲ್ಲಿ ಇರಾನ್ನ 900ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದರು. ಸಾವಿರಾರು ಜನರು ಗಾಯಗೊಂಡಿದ್ದರು.
.ಇರಾನ್ ನಾಯಕ ಖಮೇನಿ ಭೂಗತವಾಗದೇ ಇದ್ದಿದ್ದರೆ ಹತ್ಯೆ ಮಾಡುತ್ತಿದ್ದೆವು: ಇಸ್ರೇಲ್.Israel Iran War | ಶರಣಾಗುವ ಮಾತೇ ಇಲ್ಲ: ಟ್ರಂಪ್ಗೆ ಖಮೇನಿ ತಿರುಗೇಟು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.