ಸನಾ (ಯೆಮನ್): ಹುಥಿ ಸಂಘಟನೆ ಆಡಳಿತ ನಡೆಸುತ್ತಿರುವ ಯೆಮನ್ನ ರಾಜಧಾನಿ ಸನಾ ನಗರದ ಮೇಲೆ ಇಸ್ರೇಲ್ ನಡೆಸಿದ ದಾಳಿ ವೇಳೆ ಪ್ರಧಾನಿ ಹಾಗೂ ಇತರ ಹಲವು ಸಚಿವರು ಹತ್ಯೆಯಾಗಿದ್ದಾರೆ ಎಂದು ಹುಥಿ ಸುಪ್ರೀಂ ಪೊಲಿಟಿಕಲ್ ಕೌನ್ಸಿಲ್ ಮುಖ್ಯಸ್ಥ ಮಹ್ದಿ ಅಲ್–ಮಷತ್ ಶನಿವಾರ ತಿಳಿಸಿದ್ದಾರೆ.

ಗುರುವಾರ ನಡೆದ ದಾಳಿ ಸಂದರ್ಭದಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದೂ ಹೇಳಿರುವ ಅವರು, ಯಾವುದೇ ವಿವರಗಳನ್ನು ಹಂಚಿಕೊಂಡಿಲ್ಲ.

ಇರಾನ್ ಜೊತೆ ಮೈತ್ರಿ ಮಾಡಿಕೊಂಡಿರುವ ಹುಥಿ ಮುಖ್ಯಸ್ಥರು, ರಕ್ಷಣಾ ಸಚಿವರು ಹಾಗೂ ಇತರ ಹಿರಿಯ ಅಧಿಕಾರಿಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಫಲಿತಾಂಶದ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಇಸ್ರೇಲ್ ಶುಕ್ರವಾರ ಹೇಳಿತ್ತು.

ಅದರ ಬೆನ್ನಲ್ಲೇ, ಮಷತ್ ಹೇಳಿಕೆ ನೀಡಿದ್ದಾರೆ. ಆದರೆ, ರಕ್ಷಣಾ ಸಚಿವರೂ ಮೃತಪಟ್ಟಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ಅಹ್ಮದ್ ಘಲೆಬ್ ಅಲ್–ರಾಹ್ವಿ ಅವರು ಒಂದು ವರ್ಷದ ಹಿಂದಷ್ಟೇ ಯೆಮನ್ ಪ್ರಧಾನಿಯಾಗಿದ್ದರು. ಆದಾಗ್ಯೂ, ಉಪ ಪ್ರಧಾನಿ ಮೊಹಮದ್ ಮೊಫ್ತಾ ಅವರು ಆಡಳಿತದ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರು. ಪ್ರಧಾನ ಮಂತ್ರಿಗಳ ಕರ್ತವ್ಯಗಳನ್ನು ಶನಿವಾರ ಅವರಿಗೇ ನಿಯೋಜಿಸಲಾಗಿದೆ ಎಂದೂ ಹೇಳಲಾಗಿದೆ.

ಇಸ್ರೇಲ್ ಪಡೆಗಳು ಪ್ಯಾಲೆಸ್ಟೀನ್ ಬಂಡುಕೋರರ ಗುಂಪು ಹಮಾಸ್ ಅನ್ನು ಗುರಿಯಾಗಿಸಿ ಗಾಜಾ ಮೇಲೆ 2023ರ ಅಕ್ಟೋಬರ್ನಲ್ಲಿ ದಾಳಿ ಆರಂಭಿಸಿದ್ದವು. ಅದರ ಬೆನ್ನಲ್ಲೇ, ಹುಥಿ ಬಂಡುಕೋರರ ಸಂಘಟನೆ ಇರಾನ್ ಜೊತೆ ಕೈಜೋಡಿಸಿ, ಪ್ಯಾಲೆಸ್ಟೀನ್ಗೆ ಬೆಂಬಲ ಸೂಚಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.