ಕೈರೊ/ ಗಾಜಾ: ಇಸ್ರೇಲ್‌ನಲ್ಲಿ ಅಲ್ ಜಜೀರಾ ವಾಹಿನಿಯ ಪ್ರಸಾರದ ಮೇಲಿನ ನಿಷೇಧವನ್ನು ಟೆಲಿಕಾಂ ನಿಯಂತ್ರಣ ಪ್ರಾಧಿಕಾರವು 45 ದಿನಗಳವರೆಗೆ ವಿಸ್ತರಿಸಿದ ಬೆನ್ನಲ್ಲೇ ಅಲ್ ಜಜೀರಾ ಬ್ಯೂರೊದ ಮೇಲೆ ಇಸ್ರೇಲಿ ಪಡೆಗಳು ಇಂದು (ಭಾನುವಾರ) ಬೆಳಿಗ್ಗೆ ದಾಳಿ ನಡೆಸಿವೆ ಎಂದು ವರದಿಯಾಗಿದೆ.
ಇಸ್ರೇಲಿ ಪಡೆಗಳು ಅಲ್ ಜಜೀರಾ ವಾಹಿನಿಯ ಕಚೇರಿಗೆ ನುಗ್ಗಿ ಸೇನೆಯ ಆದೇಶದ ಪ್ರತಿಯನ್ನು ಅಲ್ಲಿನ ಸಿಬ್ಬಂದಿಗೆ ಹಸ್ತಾಂತರಿಸುವ ನೇರ ದೃಶ್ಯಾವಳಿಗಳನ್ನು ಪ್ರಸಾರ ಮಾಡಲಾಗಿದೆ.
‘ಇಸ್ರೇಲ್ ಸೇನೆಯ ಈ ನಿರ್ಧಾರವನ್ನು ಪತ್ರಿಕೋದ್ಯಮ ಮತ್ತು ಮಾಧ್ಯಮ ಚಟುವಟಿಕೆಗಳ ವಿರುದ್ಧದ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಜತೆಗೆ ಇಸ್ರೇಲಿ ಪಡೆಗಳ ಈ ನಡೆಯು ಪ್ಯಾಲೆಸ್ಟೀನಿಯರ ವಿರುದ್ಧದ ಆಕ್ರಮಣಕಾರಿ ಧೋರಣೆಯನ್ನು ಬಹಿರಂಗಪಡಿಸುತ್ತಿದೆ’ ಎಂದು ಪ್ಯಾಲೆಸ್ಟೀನ್ ಪತ್ರಕರ್ತರ ಸಿಂಡಿಕೇಟ್ ಆಕ್ರೋಶ ಹೊರಹಾಕಿದೆ.
❗️🇮🇱⚔️🇵🇸🇱🇧 - Israeli forces have surrounded and entered Al Jazeera's office building in Ramallah, West Bank, where they delivered a 45-day closure order. This action occurred while Al Jazeera was conducting a live broadcast. pic.twitter.com/TOMYb7weRQ
— 🔥🗞The Informant (@theinformant_x) September 22, 2024
ಅಲ್ ಜಜೀರಾ ವಾಹಿನಿಯ ಪ್ರಸಾರದಿಂದ ರಾಷ್ಟ್ರೀಯ ಭದ್ರತೆಗೆ ಅಪಾಯವನ್ನು ಉಂಟುಮಾಡುತ್ತದೆ ಎಂದು ಈ ಮೊದಲು 35 ದಿನಗಳ ನಿಷೇಧ ಹೇರಲಾಗಿತ್ತು.
ನಿಷೇಧದ ವಿರುದ್ಧ ಅಲ್ ಜಜೀರಾ ಸಲ್ಲಿಸಿದ ಅರ್ಜಿಯ ಮೇಲಿನ ಪ್ರತ್ಯೇಕ ತೀರ್ಪಿನಲ್ಲಿ, ಇಸ್ರೇಲ್‌ನ ಸುಪ್ರೀಂ ಕೋರ್ಟ್ ಕತಾರಿ ಬೆಂಬಲಿತ ಬ್ರಾಡ್‌ಕಾಸ್ಟರ್ ಚಾನೆಲ್ ವಿರುದ್ಧದ ಕ್ರಮವನ್ನು ‘ಪೂರ್ವ ನಿದರ್ಶನ’ ಎಂದು ವಿವರಿಸಿತ್ತು.
ಅಲ್ ಜಜೀರಾ ನ್ಯಾಯಾಲಯಕ್ಕೆ ಹಿಂಸಾಚಾರ ಅಥವಾ ಭಯೋತ್ಪಾದನೆಯನ್ನು ಪ್ರಚೋದಿಸಿಲ್ಲ ಮತ್ತು ನಿಷೇಧವು ಅಸಮಂಜಸವಾಗಿದೆ ಎಂದು ನ್ಯಾಯಾಲಯದ ದಾಖಲೆಗಳನ್ನು ತೋರಿಸಿತ್ತು.
ಕೇಬಲ್ ಮತ್ತು ಉಪಗ್ರಹ ಕಂಪನಿಗಳಲ್ಲಿ ನೆಟ್‌ವರ್ಕ್‌ನ ಪ್ರಸಾರಗಳು ಮತ್ತು ಅದರ ವೆಬ್‌ಸೈಟ್‌ಗಳಿಗೆ ಪ್ರವೇಶವನ್ನು ನಿರ್ಬಂಧಿಸಲಾಗುವುದು ಎಂದು ಇಸ್ರೇಲ್‌ನ ಸಂವಹನ ಸಚಿವಾಲಯ ತಿಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.