ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಇಸ್ರೇಲ್‌ಗೆ 1 ಬಿಲಿಯನ್ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರ ನೆರವು ಘೋಷಿಸಿದ ಅಮೆರಿಕ

Published 15 ಮೇ 2024, 4:34 IST
Last Updated 15 ಮೇ 2024, 4:34 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಇಸ್ರೇಲ್‌ಗೆ ಒಂದು ಬಿಲಿಯನ್ ಡಾಲರ್‌ಗೂ ಹೆಚ್ಚು ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಮದ್ದುಗುಂಡುಗಳನ್ನು ಪೂರೈಸುವುದಾಗಿ ಅಮೆರಿಕ ಹೇಳಿದೆ. ಆದರೆ ಇವುಗಳನ್ನು ಯಾವಾಗ ರವಾನಿಸಲಾಗುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟತೆ ಇಲ್ಲ.

ಈ ತಿಂಗಳಲ್ಲಿ ಇಸ್ರೇಲ್‌ಗೆ ಪೂರೈಕೆ ಮಾಡಬೇಕಿದ್ದ 3500 ಬಾಂಬ್ ಅನ್ನು ಸ್ಥಗಿತಗೊಳಿಸಿದ ಬಳಿಕ, ಇದೇ ಮೊದಲ ಬಾರಿಗೆ ಅಮೆರಿಕ ನೆರವಿನ ಘೋಷಣೆ ಮಾಡಿದೆ.

ದಕ್ಷಿಣ ಗಾಜಾದ ರಫಾ ನಗರದ ಮೇಲೆ ಈ ಬಾಂಬ್‌ಗಳನ್ನು ಪ್ರಯೋಗಿಸುವ ಸಾಧ್ಯತೆ ಇದ್ದುದ್ದರಿಂದ ಬಾಂಬ್‌ಗಳ ರವಾನೆಯನ್ನು ಸ್ಥಗಿತಗೊಳಿಸಿತ್ತು.

ಮಂಗಳವಾರ ಘೋಷಿಸಲಾದ ನೆರವಿನಲ್ಲಿ, 700 ಮಿಲಿಯನ್ ಡಾಲರ್‌ ಮೌಲ್ಯದ ಟ್ಯಾಂಕ್‌ ಮದ್ದುಗುಂಡುಗಳು, 500 ಮಿಲಿಯನ್ ಡಾಲರ್‌ ಮೌಲ್ಯದ ಯುದ್ಧವಾಹನಗಳು, 60 ಮಿಲಿಯನ್ ಡಾಲರ್‌ ಮೌಲ್ಯದ ಫಿರಂಗಿಗಳು ಸೇರಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT