ವಾಷಿಂಗ್ಟನ್: ಐದು ವರ್ಷಗಳ ಹಿಂದೆ ಅಕ್ರಮವಾಗಿ ಬಂದೂಕು ಖರೀದಿಸಿದ್ದ ಪ್ರಕರಣದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಪುತ್ರ ಹಂಟರ್ ಬೈಡನ್ ವಿರುದ್ಧ ಗುರುವಾರ ದೋಷಾರೋಪ ಹೊರಿಸಲಾಗಿದೆ.
ಡೆಲವೇರ್‌ನಲ್ಲಿ ಕೋಲ್ಟ್ ರಿವಾಲ್ವರ್ ಖರೀದಿಸಿದ್ದ ಸಮಯದಲ್ಲಿ ತಾನು ಡ್ರಗ್ಸ್ ಬಳಸುತ್ತಿರಲಿಲ್ಲ ಎಂದು ಹಂಟರ್ ಅವರು ಸುಳ್ಳು ಹೇಳಿಕೆ ನೀಡಿದ್ದರು ಎಂದು ಎರಡನೇ ದೋಷಾರೋಪ ಸಲ್ಲಿಸಲಾಗಿದೆ.
ಸುಳ್ಳು ಹೇಳಿಕೆಗಳ ಆಧಾರದಲ್ಲಿ ಅಕ್ರಮ ಬಂದೂಕು ಹೊಂದಿದ್ದರು ಎಂಬ ಮೂರನೇ ದೋಷಾರೋಪವು ಹಂಟರ್ ಅವರ ಮೇಲಿದೆ. ಇದು ಅವರನ್ನು 10 ವರ್ಷಗಳ ಜೈಲು ಶಿಕ್ಷೆಗೆ ಒಳಪಡಿಸಬಹುದು ಎಂದು ಮೂಲಗಳು ತಿಳಿಸಿವೆ.
2018ರಿಂದ ಹಂಟರ್ ಬೈಡನ್ ಪ್ರಕರಣದ ತನಿಖೆ ನಡೆಸುತ್ತಿರುವ ನ್ಯಾಯಾಂಗ ಇಲಾಖೆಯ ವಿಶೇಷ ವಕೀಲ ಡೇವಿಡ್ ವೈಸ್ ದೋಷಾರೋಪ ಸಲ್ಲಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.