ಪ್ಯಾರಿಸ್: ಫ್ರಾನ್ಸ್ನ ಪ್ಯಾರಿಸ್ನಲ್ಲಿರುವ ವಿಶ್ವವಿಖ್ಯಾತಿ ಲೂವ್ರಾ ಮ್ಯೂಸಿಯಂನಲ್ಲಿ ಭಾನುವಾರ ಕೇವಲ ನಾಲ್ಕು ನಿಮಿಷಗಳಲ್ಲಿ ದರೋಡೆಯಾಗಿದೆ ಎಂದು ಫ್ರಾನ್ಸ್ ಸಾಂಸ್ಕೃತಿಕ ಮಂತ್ರಿ ರಚಿದಾ ದಾತಿ ತಿಳಿಸಿದ್ದಾರೆ.

‘ಇದು ವೃತ್ತಿಪರ ಕಲಾವಿದರ ಕೆಲಸವಾಗಿದ್ದು, ಯಾವುದೇ ಹಿಂಸಾಚಾರವಿಲ್ಲದೆ ದರೋಡೆ ಮಾಡಿದ್ದಾರೆ. ಪ್ರಕರಣದ ಕುರಿತು ತನಿಖೆ ನಡೆಸುವ ಸಲುವಾಗಿ ಒಂದು ದಿನ ಮ್ಯೂಸಿಯಂ ಅನ್ನು ಮುಚ್ಚಲಾಗಿದೆ’ ಎಂದು ದಾತಿ ಅವರು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ತಿಳಿಸಿದ್ದಾರೆ. ಆದರೆ ಕಳ್ಳತನದ ಕುರಿತು ಹೆಚ್ಚು ಮಾಹಿತಿಯನ್ನು ಅವರು ನೀಡಿಲ್ಲ.

ಅಪೊಲೊ ಗ್ಯಾಲರಿಯ ಕಿಟಕಿ ಒಡೆದು ದರೋಡೆ ಮಾಡಲಾಗಿದೆ. ಮೂರನೇ ನೆಪೋಲಿಯನ್ ಪತ್ನಿಯ ಕಿರೀಟ, ಚಿನ್ನ ಮತ್ತು ವಜ್ರಗಳ ಆಭರಣಗಳು ಲೂಟಿಯಾಗಿವೆ ಎಂದು ಪ್ರೆಂಚ್ ದಿನಪತ್ರಿಕೆ ‘ಲೆ ಪ್ಯಾರಿಸಿಯನ್’ ವರದಿ ಮಾಡಿದೆ.

ಪ್ರಪಂಚದಲ್ಲೇ ಅತಿ ದೊಡ್ಡ ಪುರಾತನ ವಸ್ತುಗಳ ಸಂಗ್ರಹ ಇಲ್ಲಿದ್ದು, ಜಗತ್ ಪ್ರಸಿದ್ಧ ಮೊನಾಲಿಸಾಳ ಮೂಲ ಚಿತ್ರವಿರುವುದು ಇಲ್ಲಿಯೇ. ಲೂವ್ರಾ ಮ್ಯೂಸಿಯಂಗೆ ಪ್ರತಿದಿನ 30,000 ವೀಕ್ಷಕರು ಭೇಟಿ ನೀಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.