ನ್ಯೂಯಾರ್ಕ್: ‘ಎಕ್ಸ್’ನಲ್ಲಿ ಇರುವಂತೆ ಸುಳ್ಳು ಸುದ್ದಿಯಿಂದ ಕೂಡಿದ ಪೋಸ್ಟ್ಗೆ ಬಳಕೆದಾರರೇ ಫ್ಯಾಕ್ಟ್ಚೆಕ್ ಮಾಡಿ ಟಿಪ್ಪಣಿ ಬರೆಯುವಂಥ ಕ್ರಮವನ್ನು ಫೇಸ್ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿಯೂ ಪರಿಚಯಿಸಲು ಮೆಟಾ ಮುಂದಾಗಿದೆ.

ಈ ಸಾಮಾಜಿಕ ವೇದಿಕೆಗಳಲ್ಲಿ ಇಲ್ಲಿಯವರೆಗೆ ಅಮೆರಿಕ ಮೂಲಕದ ಫ್ಯಾಕ್ಟ್ಚೆಕ್ ಸಂಸ್ಥೆಗಳಿಂದ ಮಾಡಲಾದ ಫ್ಯಾಕ್ಟ್ಚೆಕ್ಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿತ್ತು. ‘ಫ್ಯಾಕ್ಟ್ಚೆಕ್ ಮಾಡುವವರು ಪಕ್ಷಪಾತಿಯಾಗಿದ್ದಾರೆ. ಆದ್ದರಿಂದ ಇಂಥವರು ಮಾಡಿದ ಫ್ಯಾಕ್ಟ್ಚೆಕ್ಗಳನ್ನು ಬಳಸಿಕೊಳ್ಳದಿರಲು ನಿರ್ಧರಿಸಲಾಗಿದೆ’ ಎಂದು ಮೆಟಾ ಹೇಳಿದೆ.

ಅಮೆರಿಕದಿಂದ ಮೊದಲುಗೊಂಡು ಜಗತ್ತಿನಾದ್ಯಂತ ಈ ಕ್ರಮವನ್ನು ಮೆಟಾ ಜಾರಿಗೆ ತರಲಿದೆ.

‘ತಮ್ಮ ಸಾಮಾಜಿಕ ವೇದಿಕೆಗಳಲ್ಲಿ ಯಾವ ವಿಷಯದ ಕುರಿತು ಪೋಸ್ಟ್ ಹಾಕಬೇಕು, ಹಾಕಬಾರದು ಎನ್ನುವ ಕುರಿತು ಬಹಳ ಕಠಿಣವಾದ ವ್ಯವಸ್ಥೆಯನ್ನು ಜಾರಿ ಮಾಡಿದ್ದೆವು. ಇದೇ ವ್ಯವಸ್ಥೆಯೊಂದಿಗೆ ಬಹಳ ದೂರ ಬಂದುಬಿಟ್ಟಿದ್ದೇವೆ. ಇಂಥದ್ದೊಂದು ವ್ಯವಸ್ಥೆಯ ಕಾರಣದಿಂದ ‘ಹಲವು ತಪ್ಪು’ಗಳನ್ನೂ ಮಾಡಿದ್ದೇವೆ’ ಎಂದು ಹೇಳಿದೆ.

ಟ್ರಂಪ್ ಗೆಲುವು: ಮೆಟಾ ಬದಲು

ಮೆಟಾವು ಬಳಸುತ್ತಿರುವ ಫ್ಯಾಕ್ಟ್ಚೆಕ್ ಸಂಸ್ಥೆಗಳ ಫ್ಯಾಕ್ಟ್ಚೆಕ್ಗಳನ್ನು ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಹಾಗೂ ‘ಎಕ್ಸ್’ ಮಾಲೀಕ ಇಲಾನ್ ಮಸ್ಕ್ ಅವರು ಬಹಳ ಹಿಂದಿನಿಂದಲೂ ದೂರುತ್ತಲೇ ಬಂದಿದ್ದರು. ಈ ಫ್ಯಾಕ್ಟ್ಚೆಕ್ಗಳು ಬಲಪಂಥೀಯ ವಿಚಾರಧಾರೆ ಯವರ ಧ್ವನಿಗಳನ್ನು ಅಡಗಿಸುತ್ತವೆ ಎಂದು ವಾದಿಸುತ್ತಿದ್ದರು.

ನವೆಂಬರ್ನಲ್ಲಿ ಟ್ರಂಪ್ ಅವರು ಚುನಾವಣೆ ಯಲ್ಲಿ ಗೆಲುವು ಸಾಧಿಸಿದ ಬಳಿಕ ಮೆಟಾದ ಸಿಇಒ ಮಾರ್ಕ್ ಜುಕರ್ಬರ್ಗ್ ಅವರು ಟ್ರಂಪ್ ಅವರಿಗೆ ಹತ್ತಿರವಾಗಲು ಹವಣಿಸುತ್ತಿದ್ದಾರೆ. ಟ್ರಂಪ್ ಅವರು ಅಧಿಕಾರ ವಹಿಸಿಕೊಳ್ಳುವ ಜ.20ರಂದು ನಡೆಯುವ ಕಾರ್ಯಕ್ರಮಕ್ಕೆ ಜುಕರ್ಬರ್ಗ್ 1 ಮಿಲಿಯನ್ ಡಾಲರ್ (ಸುಮಾರು ₹8.57 ಕೋಟಿ) ನೀಡಿದ್ದಾರೆ.

‘ಟ್ರಂಪ್ ಅವರು ಇತ್ತೀಚೆಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದಿದ್ದು ಮೆಟಾ ಮಾಡುತ್ತಿರುವ ಈ ಬದಲಾವಣೆಗಳಿಗೆ ಕಾರಣ. ವಾಕ್ ಸ್ವಾತಂತ್ರ್ಯಕ್ಕೆ ಆದ್ಯತೆ ಕೊಡಬೇಕಾಗಿದೆ ಎಂಬ ನಿರ್ಧಾರಕ್ಕೆ ಇತ್ತೀಚಿನ ಚುನಾವಣೆಯು ಪ್ರಮುಖ ಕಾರಣಗಳಲ್ಲಿ ಒಂದು’ ಎಂದು ಜುಕರ್ಬರ್ಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.