ದೋಹಾ: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದಲ್ಲಿ ಈವರೆಗೆ ಒಟ್ಟು 40,000ಕ್ಕೂ ಅಧಿಕ ಪ್ಯಾಲೆಸ್ಟೀನಿಯರು ಸಾವಿಗೀಡಾಗಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಪ್ರಕಟಿಸಿದೆ.
ಕಳೆದ ವರ್ಷ ಹಮಾಸ್ ಬಂಡುಕೋರರು ದಕ್ಷಿಣ ಇಸ್ರೇಲ್‌ನಲ್ಲಿ ಏಕಾಏಕಿ ದಾಳಿ ನಡೆಸಿ ಸುಮಾರು 1,200 ಜನರನ್ನು ಹತ್ಯೆ ಮಾಡಿ, 250 ಜನರನ್ನು ಅಪಹರಿಸಿ ಗಾಜಾಕ್ಕೆ ಕರೆತಂದಿದ್ದರು. ಇದರ ಪ್ರತೀಕಾರಕ್ಕೆ ಮುಂದಾದ ಇಸ್ರೇಲ್, ಹಮಾಸ್ ಮೇಲೆ ಯುದ್ಧ ಸಾರಿತು.
2023ರ ಅಕ್ಟೋಬರ್ 7ರಂದು ಯುದ್ಧ ಪ್ರಾರಂಭವಾದ ನಂತರ 10 ತಿಂಗಳುಗಳಿಂದ ಇಸ್ರೇಲ್, ಗಾಜಾದ ಮೇಲೆ ನಿರಂತರವಾಗಿ ತನ್ನ ದಾಳಿ ಮುಂದುವರಿಸಿದೆ.