ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಳದಲ್ಲಿ ಹಾರಾಟ ನಿಲ್ಲಿಸಿದ ನಾಸಾದ ‘ಇಂಜೆನ್ಯುಯಿಟಿ’

Published 26 ಜನವರಿ 2024, 15:56 IST
Last Updated 26 ಜನವರಿ 2024, 15:56 IST
ಅಕ್ಷರ ಗಾತ್ರ

ಕೇಪ್‌ ಕ್ಯಾನವೆರಲ್, ಅಮೆರಿಕ: ‘ನಾಸಾ’ದ ಪುಟಾಣಿ ಹೆಲಿಕಾಪ್ಟರ್‌ ‘ಇಂಜೆನ್ಯುಯಿಟಿ’ ಮಂಗಳ ಗ್ರಹದಲ್ಲಿ ತನ್ನ ಕಡೆಯ ಹಾರಾಟವನ್ನು ನಡೆಸಿದೆ. 1.8 ಕೆ.ಜಿ ತೂಕದ ‘ಇಂಜೆನ್ಯುಯಿಟಿ’ ಮತ್ತೆಂದೂ ಹಾರಾಟ ನಡೆಸುವುದಿಲ್ಲ ಎಂದು ನಾಸಾ ಗುರುವಾರ ಪ್ರಕಟಿಸಿದೆ.

ಇದರ ರೆಕ್ಕೆಗಳು ಜಖಂಗೊಂಡಿರುವುದು ಇದಕ್ಕೆಕಾರಣ. ಇದು, ಮಂಗಳದಲ್ಲಿಯೇ ಇರಲಿದ್ದು, ನಿಯಂತ್ರಣ ಕೊಠಡಿ ಜೊತೆ ಸಂಪರ್ಕದಲ್ಲಿರಲಿದೆ. ಈ ಮೂಲಕ ₹ 706 ಕೋಟಿ ವೆಚ್ಚದ (85 ಮಿಲಿಯನ್‌ ಡಾಲರ್) ಯೋಜನೆ ಅಂತ್ಯಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಅಲ್ಪಾವಧಿಯ ತಾಂತ್ರಿಕ ಪ್ರಾತ್ಯಕ್ಷಿಕೆ ಉದ್ದೇಶದ ‘ಇಂಜೆನ್ಯುಯಿಟಿ’, ಸಣ್ಣ ಗಾತ್ರದ ರೊಬೊಟಿಕ್ ಹೆಲಿಕಾಪ್ಟರ್‌ 2021ರಲ್ಲಿ ಮಂಗಳ ಗ್ರಹಕ್ಕೆ ಕಾಲಿಟ್ಟಿತ್ತು. ಮೂರು ವರ್ಷಗಳಲ್ಲಿ 72 ಬಾರಿ ಹಾರಾಟ ನಡೆಸಿದ್ದು, 19 ಕಿ.ಮೀ. ಕ್ರಮಿಸಿದೆ. ಇದು, ಉದ್ದೇಶಿತ ಯೋಜನೆಗಿಂತಲೂ 14 ಪಟ್ಟು ಅಧಿಕ. 24 ಮೀಟರ್ ಎತ್ತರದಲ್ಲಿ ಗಂಟೆಗೆ 36 ಕಿ.ಮೀ ವೇಗದಲ್ಲಿ ಈ ಹೆಲಿಕಾಪ್ಟರ್‌ ಕ್ರಮಿಸಿದೆ’ ಎಂದು ನಾಸಾ ವಿವರಿಸಿದೆ.  

‘ಈ ಅಸಾಧಾರಣ ಹೆಲಿಕಾಪ್ಟರ್ ನಿರೀಕ್ಷಿಸಿದ್ದಕ್ಕಿಂತಲೂ ಎತ್ತರದಲ್ಲಿ ಹಾರಾಟ ನಡೆಸಿದ್ದು, ಭಿನ್ನ ವಾತಾವರಣದಲ್ಲಿಯೂ ತನ್ನ ಸಾಮರ್ಥ್ಯ ನಿರೂಪಿಸಿತ್ತು’ ಎಂದು ನಾಸಾದ ಆಡಳಿತಾಧಿಕಾರಿ ಬಿಲ್‌ ನೆಲ್ಸನ್‌ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕಳೆದ ವಾರ ಹಾರಾಟದ ಬಳಿಕ ಹೆಲಿಕಾಪ್ಟರ್ ಅನ್ನು ಇಳಿಸುವಾಗ ಅದರ ರೆಕ್ಕೆಗಳು ಜಖಂಗೊಂಡಿರುವುದು ಗೊತ್ತಾಯಿತು. ಈ ರೆಕ್ಕೆಗಳು ಬಳಕೆಗೆ ಸೂಕ್ತವಾಗಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT