ವಾಷಿಂಗ್ಟನ್: ಹಾಲಿವುಡ್ನ ಪ್ರಮುಖ ಸ್ಟುಡಿಯೊವಾಗಿರುವ ವಾರ್ನರ್ ಬ್ರೋ ಅನ್ನು ಸ್ಟ್ರೀಮಿಂಗ್ ದೈತ್ಯ ನೆಟ್ಫ್ಲಿಕ್ಸ್ ಸಂಸ್ಥೆ ಖರೀದಿಸುವುದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಳವಳ ವ್ಯಕ್ತಪಡಿಸಿದ್ದಾರೆ.

ನೆಟ್ಫ್ಲಿಕ್ಸ್ ಈಗಾಗಲೇ ಅತಿ ದೊಡ್ಡ ಮಾರುಕಟ್ಟೆ ಪಾಲು ಹೊಂದಿದೆ. ಅದು ವಾರ್ನರ್ ಬ್ರೋ ಸ್ಟುಡಿಯೊವನ್ನು ಖರೀದಿಸುವುದರಿಂದ ತೊಂದರೆಯಾಗಬಹುದು. ಈ ನಿರ್ಧಾರದಲ್ಲಿ ನಾನು ಮಧ್ಯೆ ಪ್ರವೇಶಿಸುತ್ತೇನೆ ಎಂದು ತಿಳಿಸಿದ್ದಾರೆ.

ವಾರ್ನರ್ ಬ್ರೋ ಸ್ಟುಡಿಯೊದ ಮಾರಾಟವನ್ನು ಹಾಲಿವುಡ್ ಗಣ್ಯರು ವಿರೋಧಿಸುತ್ತಿದ್ದಾರೆ. ನೆಟ್ಫ್ಲಿಕ್ಸ್ನೊಂದಿಗಿನ ಒಪ್ಪಂದವು ಅವರಲ್ಲಿ ಕೋಪವನ್ನು ಉಂಟುಮಾಡಿದೆ ಎಂದು ಹೇಳಿದ್ದಾರೆ.

ಆದರೆ ಇತ್ತೀಚೆಗೆ ಶ್ವೇತ ಭವನಕ್ಕೆ ಭೇಟಿ ನೀಡಿದ್ದ ನೆಟ್ಫ್ಲಿಕ್ಸ್ ಸಹ–ಸಿಇಒ ಟೆಡ್ ಸರಾಂಡೋಸ್ ಅವರನ್ನು ಹೊಗಳಿದ್ದ ಟ್ರಂಪ್. ‘ನೀವು ಸಿನಿಮಾದ ಇತಿಹಾಸದಲ್ಲೇ ಅತಿದೊಡ್ಡ ಕೆಲಸವೊಂದನ್ನು ಮಾಡಿದ್ದೀರಾ’ ಎಂದು ಹೊಗಳಿದ್ದರು.

ನೆಟ್ಫ್ಲಿಕ್ಸ್ ಸಂಸ್ಥೆಯು ಹೆಚ್ಬಿಒ ಮ್ಯಾಕ್ಸ್ ಮತ್ತು ವಾರ್ನರ್ ಬ್ರೋ ಸ್ಟುಡಿಯೊವನ್ನು ಖರೀದಿಸಲು ಮುಂದಾಗಿದ್ದು, ₹ 7.4 ಟ್ರಿಲಿಯನ್ ಒಪ್ಪಂದ ಕೂಡ ನಡೆದಿದೆ.
.ವಾರ್ನರ್ ಬ್ರೋ ಸ್ಟುಡಿಯೊ ನೆಟ್ಫ್ಲಿಕ್ಸ್ ತೆಕ್ಕೆಗೆ: OTT ಬಳಕೆದಾರರಿಗೆ ಲಾಭವೇನು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.