ನ್ಯೂಯಾರ್ಕ್: ಸ್ಟ್ರೀಮಿಂಗ್ ದೈತ್ಯ ಎಂದೇ ಖ್ಯಾತವಾಗಿರುವ ಪ್ರಮುಖ ಒಟಿಟಿ ವೇದಿಕೆ ನೆಟ್ಫ್ಲಿಕ್ಸ್, ಇದೀಗ ಅಮೆರಿಕದ ಪ್ರಮುಖ ಟೆಲಿವಿಷನ್ ಸ್ಟುಡಿಯೊ ವಾರ್ನರ್ ಬ್ರೋ. ಡಿಸ್ಕವರಿಯನ್ನು ಖರೀದಿಸಲು ಮುಂದಾಗಿದೆ.

ವಾರ್ನರ್ ಬ್ರೋ. ಡಿಸ್ಕವರಿಯನ್ನು ₹ 7.4 ಟ್ರಿಲಿಯನ್ ಕೊಟ್ಟು ಕೊಂಡುಕೊಳ್ಳಲು ನೆಟ್ಫ್ಲಿಕ್ಸ್ ಸಂಸ್ಥೆಯು ಶುಕ್ರವಾರ ಒಪ್ಪಿಕೊಂಡಿದೆ.

ಮನರಂಜನಾ ವಲಯದಲ್ಲಿ ಇದು ಅತಿದೊಡ್ದ ಒಪ್ಪಂದವಾಗಿದೆ. ಇದುವರೆಗೂ ಡಿಸ್ನಿ ಕಂಪನಿಯು ಫಾಕ್ಸ್ ಸ್ಟುಡಿಯೊವನ್ನು 2019ರಲ್ಲಿ ₹ 5.84 ಟ್ರಿಲಿಯನ್ ಕೊಟ್ಟು ಖರೀದಿಸಿದ್ದು ದೊಡ್ಡ ಒಪ್ಪಂದವಾಗಿತ್ತು.

ವಾರ್ನರ್ ಬ್ರೋ. ಡಿಸ್ಕವರಿಯ ಮಾರುಕಟ್ಟೆ ಮೌಲ್ಯವು ₹ 7.3 ಟ್ರಿಲಿಯನ್ ಇತ್ತು, ಪ್ರತಿ ಷೇರಿಗೆ ₹ 2,495.43 ಇತ್ತು. ಗುರುವಾರದಿಂದ ಕಂಪನಿಯ ಷೇರು ಮೌಲ್ಯ ಕೊನೆಗೊಂಡಿದೆ.

ವಾರ್ನರ್ ಬ್ರೋ ಸ್ಟುಡಿಯೊ ಗೇಮ್ ಆಫ್ ಥ್ರೋನ್ಸ್, ಹ್ಯಾರಿ ಪಾಟರ್ ಸೇರಿದಂತೆ ಹಲವು ಸಿನಿಮಾ ಸರಣಿ ಹಾಗೂ ವೆಬ್ ಸರಣಿಗಳನ್ನು ನಿರ್ಮಿಸಿತ್ತು.

ಈ ಒಪ್ಪಂದದಿಂದಾಗಿ ನೆಟ್ಫ್ಲಿಕ್ಸ್ಗೆ ಹೆಚ್ಚಿನ ಲಾಭವಾಗಲಿದೆ. ಹೆಚ್ಬಿಒ ಮ್ಯಾಕ್ಸ್ನಲ್ಲಿದ್ದ ಸಿನಿಮಾ ಹಾಗೂ ವೆಬ್ ಸರಣಿಗಳನ್ನು ಇನ್ನೂ ನೆಟ್ಫ್ಲಿಕ್ಸ್ನಲ್ಲಿ ಕೂಡ ವೀಕ್ಷಿಸಬಹುದಾಗಿದೆ.
.ತನ್ನದೇ ಆರತಕ್ಷತೆಗೆ ವಿಡಿಯೊ ಕಾನ್ಪರೆನ್ಸ್ನಲ್ಲಿ ಭಾಗಿಯಾದ ಹುಬ್ಬಳ್ಳಿ ಯುವತಿ.ಮದುವೆಗೆ ಹೋಗಲು ವಿಧಾನಸಭೆಗೆ ಚಕ್ಕರ್: ಈ ಋತುವಿನಲ್ಲಿ ಕಲಾಪವೇ ಬೇಡ ಎಂದ ಸಚಿವ..!.IndiGo: ಬೆಂಗಳೂರಿನಿಂದ ಇಂಡಿಗೊ ಮೂಲಕ ಪ್ರಯಾಣಿಸುತ್ತಿರುವ ಪ್ರಯಾಣಿಕರ ಗಮನಕ್ಕೆ...

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.