ಕರಾಕಸ್/ ವೆನಿಜುವೆಲಾ: ಅಮೆರಿಕ ಸೇನೆಯಿಂದ ಸೆರೆಹಿಡಿಯಲ್ಪಟ್ಟ ವೆನಿಜುವೆಲಾ ಅಧ್ಯಕ್ಷ ನಿಕೊಲಸ್ ಮಡೂರೊ ಮತ್ತು ಅವರ ಪತ್ನಿ ಸಿಲಿಯಾ ಪ್ಲೋರ್ಸ್ ಅವರನ್ನು ನ್ಯೂಯಾರ್ಕ್ಗೆ ಕರೆದೊಯ್ಯಲಾಗಿದೆ ಎಂದು ವರದಿಯಾಗಿದೆ.

ಅಮೆರಿಕದ ಸರ್ಕಾರಿ ವಿಮಾನದಿಂದ ಇಳಿಯುತ್ತಿದ್ದಂತೆ ಮಡೂರೊ ಅವರನ್ನು ಎಫ್ಬಿಐ ಏಜೆಂಟರು ಸುತ್ತುವರಿದರು. ಬಳಿಕ ನ್ಯೂಯಾರ್ಕ್ ಗಾರ್ಡ್ ರಕ್ಷಣೆಯಲ್ಲಿ ಕರೆದೊಯ್ಯಲಾಯಿತು.
.ಅಮೆರಿಕ ‘ಸೆರೆ’ಯಲ್ಲಿ ವೆನೆಜುವೆಲಾ ಅಧ್ಯಕ್ಷ: ಅಂತರರಾಷ್ಟ್ರೀಯ ಸಮುದಾಯ ಖಂಡನೆ.ವೆನೆಜುವೆಲಾ ಮೇಲೆ ವಿಶ್ವದ ದೊಡ್ಡಣ್ಣನ ದಾಳಿಗೆ ಪ್ರಮುಖ ಕಾರಣಗಳೇನು ?.
63 ವರ್ಷದ ಮಡೂರೊ ಮತ್ತು ಅವರ ಪತ್ನಿಯನ್ನು ವಿಚಾರಣೆಗಾಗಿ ನ್ಯೂಯಾರ್ಕ್ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಈ ನಡುವೆ ಸೆರೆಹಿಡಿದ ನಂತರದ ಮಡೂರೊ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡಿದ್ದಾರೆ.

ನಿಕೊಲಸ್ ಮಡೂರೊ ಅಂತರರಾಷ್ಟ್ರೀಯ ಮಾದಕ ವಸ್ತು ಕಳ್ಳಸಾಗಣೆ ಜಾಲದ ಪ್ರಮುಖ ಸೂತ್ರಧಾರ ಎಂದು ಆರೋಪಿಸಿ ಅಮೆರಿಕ ಈ ದಾಳಿ ನಡೆಸಿದೆ. ಮಾದಕ ವಸ್ತು ಭಯೋತ್ಪಾದನೆ, ಅಮೆರಿಕಕ್ಕೆ ಕೊಕೇನ್ ರವಾನೆ, ಮಾನವ ಕಳ್ಳಸಾಗಣೆ, ಮತ್ತು ಅಕ್ರಮ ಶಸ್ತ್ರಾಸ್ತ್ರಗಳನ್ನು ಹೊಂದಿದ ಆರೋಪ ಅವರ ಮೇಲಿದೆ. ಆದರೆ ಈ ಆರೋಪಗಳನ್ನು ವೆಜಿಜುವೆಲಾ ತಳ್ಳಿ ಹಾಕಿದೆ.

ವೆನಿಜುವೆಲಾದಲ್ಲಿ ಅಧಿಕಾರ ವರ್ಗಾವಣೆ ಆಗುವವರೆಗೂ ದೇಶವನ್ನು ನಾವೇ ಮುನ್ನಡೆಸಲಿದ್ದೇವೆ ಎಂದು ಟ್ರಂಪ್ ಘೋಷಿಸಿದ್ದಾರೆ. ವೆನಿಜುವೆಲಾದ ಮೇಲೆ ಪೂರ್ಣ ಪ್ರಮಾಣದ ಸೇನಾ ದಾಳಿಯನ್ನು ಟ್ರಂಪ್ ತಳ್ಳಿ ಹಾಕಿಲ್ಲ.

ಈ ಕಾರ್ಯಾಚರಣೆಯಿಂದಾಗಿ ಲ್ಯಾಟಿನ್ ಅಮೆರಿಕದಲ್ಲಿ ಅನಿಶ್ಚಿತತೆಯ ಹಾಗೂ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ಕೆರೆಬಿಯನ್ ಪ್ರದೇಶದಲ್ಲಿ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.