ಭಾನುವಾರ, 21 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಯಾರಿಸ್‌ನಲ್ಲಿ ಪೊಲಿಸರು–ಯುವಕರ ಸಂಘರ್ಷ: 9 ಜನ ಸೆರೆ

ಪೊಲೀಸರ ಗುಂಡಿಗೆ ಬೈಕ್‌ ಸವಾರ ಹತ್ಯೆಯಾದ ಕಾರಣಕ್ಕೆ ಗಲಾಟೆ
Published 18 ಮಾರ್ಚ್ 2024, 16:36 IST
Last Updated 18 ಮಾರ್ಚ್ 2024, 16:36 IST
ಅಕ್ಷರ ಗಾತ್ರ

ಪ್ಯಾರಿಸ್‌: ಪ್ಯಾರಿಸ್‌ ಹೊರವಲಯದಲ್ಲಿ ಪೊಲೀಸ್‌ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

ಪ್ಯಾರಿಸ್‌ನ ಲಾ ಕಕೋನರ್ಯುವ್‌ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಭಾನುವಾರ ಸಂಜೆ ಯುವಕರು ಹಾಗೂ ಪೊಲೀಸರ ನಡುವೆ ಸಂಘರ್ಷ ನಡೆದ ವೇಳೆ 9 ಯುವಕರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಜುಲೈ 26ರಿಂದ ಒಲಂಪಿಕ್ಸ್‌ ಪ್ರಾರಂಭವಾಗುತ್ತಿರುವ ಕಾರಣ ಭದ್ರತಾ ವಿಷಯ ಮಹತ್ವದ್ದಾಗಿದೆ. ಹೀಗಾಗಿ ಬೈಕ್‌ ಚಲಾಯಿಸಿಕೊಂಡು ಹೋಗುತ್ತಿದ್ದ ಉತ್ತರ ಅಮೆರಿಕ ಮೂಲದ ಯುವಕನಿಗೆ ತಪಾಸಣೆಗಾಗಿ ನಿಲ್ಲಿಸುವಂತೆ ಸೂಚಿಸಿದ್ದರು. ಆದರೆ, ಯುವಕ ಬೈಕ್‌ ನಿಲ್ಲಿಸಲಿಲ್ಲ ಎಂಬ ಕಾರಣಕ್ಕೆ ಪೊಲೀಸರು ಯುವಕನ ಮೇಲೆ ಗುಂಡು ಹಾರಿಸಿದ್ದರು. ಆಗ ಯುವಕ ಮೃತಪಟ್ಟಿದ್ದ. ಘಟನೆಗೆ ಸಂಬಂಧಿಸಿದಂತೆ ಯುವಕರು ಮತ್ತು ಪೊಲೀಸರ ನಡುವೆ ಈ ಸಂಘರ್ಷ ನಡೆದಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT