ಭಾನುವಾರ, 14 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಣ್ವಸ್ತ್ರ | ರಷ್ಯಾದ ನಿಲುವಿನಲ್ಲಿ ಬದಲಾವಣೆ ಕಂಡುಬಂದಿಲ್ಲ: ಸ್ಟೊಲ್‌ಟೆನ್‌ಬರ್ಗ್‌

Published 11 ಜುಲೈ 2023, 12:16 IST
Last Updated 11 ಜುಲೈ 2023, 12:16 IST
ಅಕ್ಷರ ಗಾತ್ರ

ವಿಲ್ನಿಯಸ್‌: ಅಣ್ವಸ್ತ್ರಗಳಿಗೆ ಸಂಬಂಧಿಸಿದಂತೆ ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ‘ನ್ಯಾಟೊ’ದ ಪ್ರಧಾನ ಕಾರ್ಯದರ್ಶಿ ಜೆನ್ಸ್ ಸ್ಟೊಲ್‌ಟೆನ್‌ಬರ್ಗ್‌ ಹೇಳಿದ್ದಾರೆ.

ಬೆಲಾರಸ್‌ನಲ್ಲಿ ಅಣ್ವಸ್ತ್ರ ಸಜ್ಜಿತ ಶಸ್ತ್ರಾಸ್ತ್ರಗಳನ್ನು ದಾಸ್ತಾನು ಮಾಡುವ ತೀರ್ಮಾನವನ್ನು ರಷ್ಯಾ ಪ್ರಕಟಿಸಿದ ಹಿಂದೆಯೇ ನ್ಯಾಟೊ ಈ ಕುರಿತು ಪ್ರತಿಕ್ರಿಯಿಸಿದೆ. ‘ರಷ್ಯಾದ ನಿಲುವು ದುಡುಕಿನದ್ದು ಹಾಗೂ ಅಪಾಯಕಾರಿಯಾದುದು’ ಎಂದು ನ್ಯಾಟೊ ಪ್ರತಿಕ್ರಿಯಿಸಿದೆ.

ನ್ಯಾಟೊ ಸದಸ್ಯ ರಾಷ್ಟ್ರಗಳು ರಷ್ಯಾದ ನಡೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿವೆ. ಸದ್ಯ, ರಷ್ಯಾದ ನಿಲುವಿನಲ್ಲಿ ಯಾವುದೇ ಬದಲಾವಣೆ ಕಾಣಿಸುತ್ತಿಲ್ಲ. ಆದರೆ, ನಾವು ಎಚ್ಚರಿಕೆಯಿಂದ ಗಮನಿಸುತ್ತಿದ್ದೇವೆ ಎಂದು ಸ್ಟೊಲ್‌ಟೆನ್‌ಬರ್ಗ್‌ ಅವರು ಹೇಳಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT