ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಕಸ’ ತುಂಬಿದ ಬೃಹತ್ ಬಲೂನ್‌ಗಳನ್ನು ದಕ್ಷಿಣ ಕೊರಿಯಾಕ್ಕೆ ಕಳುಹಿಸಿದ ಉತ್ತರ ಕೊರಿಯಾ

Published 29 ಮೇ 2024, 9:45 IST
Last Updated 29 ಮೇ 2024, 9:45 IST
ಅಕ್ಷರ ಗಾತ್ರ

ಸೋಲ್‌: ನೆರೆಹೊರೆಯ ರಾಷ್ಟ್ರದೊಂದಿಗೆ ಸೆಣಸಾಟದ ಭಾಗವಾಗಿ ಉತ್ತರ ಕೊರಿಯಾವು ಬೃಹತ್‌ ಬಲೂನ್‌ಗಳನ್ನು ಬಳಸಿಕೊಂಡು ‘ಕಸ’ ತುಂಬಿದ ಚೀಲಗಳನ್ನು ದಕ್ಷಿಣ ಕೊರಿಯಾದ ಗಡಿಯುದ್ದಕ್ಕೂ ಬಿಸಾಡಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಂಗಳವಾರ ತಡರಾತ್ರಿ ಉತ್ತರ ಕೊರಿಯಾದಿಂದ ಕಳುಹಿಸಲಾದ ಸುಮಾರು 260 ಬಲೂನ್‌ಗಳನ್ನು ಪತ್ತೆಹಚ್ಚಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ.

ಸೋಲ್‌ನ ಗಡಿ ಪ್ರದೇಶ ಸೇರಿದಂತೆ ದಕ್ಷಿಣ ಕೊರಿಯಾದ ವಿವಿಧ ಸ್ಥಳಗಳಲ್ಲಿ ‘ಕಸ’ ತುಂಬಿದ ಚೀಲಗಳನ್ನು ಎಸೆಯಲಾಗಿದೆ ಎಂದು ‘ಯೋನ್‌ಹಾಪ್‌’ ಸುದ್ದಿಸಂಸ್ಥೆ ವರದಿ ಮಾಡಿದೆ.

ಚೀಲಗಳಲ್ಲಿ ಹಾನಿಗೊಳಗಾದ ವಸ್ತುಗಳು, ಕಾಗದದ ಹಾಳೆಗಳು, ಪ್ಲಾಸ್ಟಿಕ್ ಬಾಟಲಿಗಳು, ಬ್ಯಾಟರಿಗಳು, ಗೊಬ್ಬರ, ಶೂಗಳ ಬಿಡಿಭಾಗ ಸೇರಿದಂತೆ ವಿವಿಧ ಕಸವನ್ನು ತುಂಬಿರುವುದು ಕಂಡುಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದುವರೆಗೆ ಯಾವುದೇ ಹಾನಿ ಸಂಭವಿಸಿಲ್ಲ. ಬಲೂನ್‌ ಹಾಗೂ ಕಸ ತುಂಬಿರುವ ಚೀಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT