ಸಾವೊ ಪಾಲೊ (ಬ್ರೆಜಿಲ್): ಲ್ಯಾಟಿನ್ ಅಮೆರಿಕ ರಾಷ್ಟ್ರಗಳ ಪೈಕಿ ಬ್ರೆಜಿಲ್‌ನಲ್ಲಿಕೊರೊನಾ ವೈರಸ್ ದಿನೇ ದಿನೆ ಉಲ್ಬಣಗೊಳ್ಳುತ್ತಿದೆ. ಹೀಗಾಗಿ ಅಲ್ಲಿ ಸೋಂಕಿತರ ಸಂಖ್ಯೆ 10 ಲಕ್ಷದತ್ತ ಮುಖ ಮಾಡಿದೆ.

ಸದ್ಯ ಬ್ರೆಜಿಲ್‌ನಲ್ಲಿ 9,55,377 ಸೋಂಕಿತರಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಅದು ಹತ್ತು ಲಕ್ಷ ತಲುವುದು ನಿಚ್ಚಳ. ಇನ್ನು ಸಾವಿನ ಸಂಖ್ಯೆ ಅಲ್ಲಿ 4,48,962 ಮುಟ್ಟಿದ್ದು, ಕೊರೊನಾ ವೈರಸ್‌ನಿಂದಾಗಿ ಅತಿ ಹೆಚ್ಚು ಸಾವುಗಳನ್ನು ಕಂಡ ದೇಶಗಳ ಪೈಕಿ ಬ್ರೆಜಿಲ್ ಈಗ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿ ಅಮೆರಿಕ ಇದೆ. ಅಲ್ಲಿ 1,17,717 ಸಾವಿಗೀಡಾಗಿದ್ದಾರೆ. ಅಮೆರಿಕದಲ್ಲಿ ಸೋಂಕಿತರ ಸಂಖ್ಯೆ 21,63,290ಕ್ಕೆ ಏರಿದೆ.

ಪಾಕಿಸ್ತಾನ ತತ್ತರ

ನೆರೆಯ ಪಾಕಿಸ್ತಾನದಲ್ಲೂ ಕೋವಿಡ್–19 ಏರುಗತಿಯಲ್ಲಿ ಸಾಗುತ್ತಿದೆ. ಬುಧವಾರ ಒಂದೇ ದಿನ ಅಲ್ಲಿ 118 ಮಂದಿ ಸೋಂಕಿನಿಂದ ಸಾವಿಗೀಡಾಗಿದ್ದು, ಈ ವರೆಗೆ ಒಟ್ಟಾರೆ ಅಲ್ಲಿ 3093 ಮಂದಿ ಮಹಾಮಾರಿಗೆ ಪ್ರಾಣ ತೆತ್ತಿದ್ದಾರೆ. ಸೋಂಕಿತರ ಸಂಖ್ಯೆ 1.60 ಲಕ್ಷ ದಾಟಿದೆ.

ವುಹಾನ್ ನಂತರ ಈಗ ಬೀಜಿಂಗ್‌ನಲ್ಲಿ ಮಹಾಮಾರಿ

ಕೊರೊನಾ ವೈರಸ್‌ನ ಉಗಮ ಸ್ಥಾನ ಚೀನಾದಲ್ಲಿ ಎರಡನೇ ಹಂತದ ಸೋಂಕು ಪ್ರಸರಣೆ ಆರಂಭವಾಗಿದೆ. ಅಲ್ಲಿ ಬುಧವಾರ 28 ಹೊಸ ಪ್ರಕರಣಗಳು ಪತ್ತೆಯಾದವು. ಅದರಲ್ಲಿ 24 ಬೀಜಿಂಗ್‌ನಿಂದಲೇ ವರದಿಯಾಗಿವೆ. ವುಹಾನ್ ನಂತರ ಈಗ ರಾಷ್ಟ್ರ ರಾಜಧಾನಿ ಬೀಜಿಂಗ್‌ನಲ್ಲಿ ಕೋವಿಡ್ ಉಲ್ಬಣವಾಗುತ್ತಿದೆ. ಕೇವಲ ಐದಾರು ದಿನಗಳಲ್ಲಿ ಅಲ್ಲಿ 161 ಪ್ರಕರಣಗಳು ಪತ್ತೆಯಾಗಿವೆ. ಈ ಮಧ್ಯೆ ಬೀಜಿಂಗ್‌ನಲ್ಲಿ ಸೋಂಕು ಪತ್ತೆ ಪರೀಕ್ಷೆಯೂ ವೇಗವಾಗಿ ನಡೆಯುತ್ತಿದೆ. ಬೀಜಿಂಗ್‌ನಲ್ಲಿ ವಿಮಾನ ಯಾನವನ್ನೂ ರದ್ದು ಮಾಡಲಾಗಿದೆ.

ಜರ್ಮಿನಿಯ ಮಾಂಸ ಸಂಸ್ಕರಣೆ ಘಟಕವೊಂದರಲ್ಲಿ ಕೊರೊನಾ ವೈರಸ್ ದಿಢೀರ್ ಉಲ್ಭಣಗೊಂಡಿದೆ. ಅದೊಂದೇ ಘಟಕದಲ್ಲಿ 657 ಮಂದಿಗೆ ಸೋಂಕು ತಗುಲಿದೆ.

ಮಧ್ಯ ಅಮೆರಿಕದ ಹಾಂಡರ್ಸ್ ನಗರದ ಅಧ್ಯಕ್ಷ ಮತ್ತು ಪತ್ನಿಗೆ ಸೋಂಕು ಇರುವುದು ದೃಢವಾಗಿದೆ.

ಆರ್ಥಿಕ ಚಟುವಟಿಕೆಗಳಿಗೆ ದುಬೈ ಚಾಲನೆ

ಇದೆಲ್ಲದರ ನಡುವೆ ದುಬೈ ಆರ್ಥಿಕ ಚಟುವಟಿಕೆಗಳಿಗೆ ಪುನಃ ಚಾಲನೆ ನೀಡಿದೆ. ಕೊರೊನಾ ವೈರಸ್ ಭೀತಿಯಿಂದಾಗಿ ದೇಶದಲ್ಲಿ ಲಾಕ್‌ಡೌನ್ ಘೋಷಣೆ ಮಾಡಲಾಗಿತ್ತು. ಅಲ್ಲದೆ, ಲಾಕ್‌ಡೌನ್ ನಿಯಮ ಉಲ್ಲಂಘಿಸುವವರಿಗೆ ಕಠಿಣ ಶಿಕ್ಷೆ ವಿಧಿಸುವ ಕಾನೂನನ್ನೂ ಜಾರಿಗೆ ತರಲಾಗಿತ್ತು. ವಿಶ್ವದ ಹಲವು ರಾಷ್ಟ್ರಗಳು ಲಾಕ್‌ಡೌನ್ ತೆರವು ಮಾಡುತ್ತಿರುವ ಹಿನ್ನೆಲೆಯಲ್ಲಿ ದುಬೈ ಕೂಡಾ ಹಂತ ಹಂತವಾಗಿ ವ್ಯಾಪಾರೋದ್ಯಮವನ್ನು ತೆರೆಯುತ್ತಿದೆ.

ಔಷಧದ ಕ್ಲಿನಿಕಲ್ ಟ್ರಯಲ್

ಹಲವರು ರಾಷ್ಟ್ರಗಳು ತಮ್ಮದೇ ಸಂಶೋಧಿತ ಔಷಧಗಳ ಪರೀಕ್ಷೆಗೂ ಚಾಲನೆ ನೀಡುತ್ತಿವೆ. ರಷ್ಯಾ ತನ್ನ ಔಷಧವೊಂದರ ಕ್ಲಿನಿಕಲ್ ಟ್ರಯಲ್ ಆರಂಭಿಸಿದೆ. ನೆರೆಯ ಬಾಂಗ್ಲಾ ದೇಶವೂ ಕೂಡ ಇದರಲ್ಲಿ ಮುಂದಿದೆ. ಅದೂ ಕೂಡ ತನ್ನ ಎರಡು ಔಷಧಗಳ ಪರೀಕ್ಷೆ ಶುರು ಮಾಡಿದೆ. ಅಲ್ಲದೆ, ಇದರಿಂದ ಸಕಾರಾತ್ಮಕ ಪ್ರತಿಫಲವೂ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ಅತಿ ಹೆಚ್ಚು ಸೋಂಕು ಪ್ರಕರಣಗಳನ್ನು ಹೊಂದಿರುವ ವಿಶ್ವದ ಐದು ರಾಷ್ಟ್ರಗಳು

ಅಮೆರಿಕ–21,63,290
ಬ್ರೆಜಿಲ್–9,55,377
ರಷ್ಯಾ–5,52,549
ಭಾರತ–3,66,946
ಬ್ರಿಟನ್–3,00,717

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.