ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆಜಾನ್‌ ವಿರುದ್ಧ ಸಿಖ್‌ ಒಕ್ಕೂಟ ಆಕ್ರೋಶ

Last Updated 19 ಡಿಸೆಂಬರ್ 2018, 19:33 IST
ಅಕ್ಷರ ಗಾತ್ರ

ನ್ಯೂಯಾರ್ಕ್‌: ಸ್ವರ್ಣಮಂದಿರ ಚಿತ್ರವಿರುವ ಕಾಲೊರಸು (ಡೋರ್‌ ಮ್ಯಾಟ್‌) ಮತ್ತು ರಗ್ಗುಗಳನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟ ಅಮೆಜಾನ್‌ ಜಾಲತಾಣದ ವಿರುದ್ಧ ಸಿಖ್‌ ಸಮುದಾಯ ಆಕ್ರೋಶ ವ್ಯಕ್ತಪಡಿಸಿದೆ.

ಸಮುದಾಯದ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಆಕ್ರಮಣಕಾರಿ ವಹಿವಾಟನ್ನು ನಿಷೇಧಿಸುವಂತೆ ಸಿಖ್‌ ಒಕ್ಕೂಟ ಒತ್ತಾಯಿಸಿದೆ.

‘ಐತಿಹಾಸಿಕ ಪವಿತ್ರ ಸ್ವರ್ಣಮಂದಿರದ ಚಿತ್ರವಿರುವ ಕಾಲೊರಸು, ರಗ್ಗುಗಳು ಮತ್ತು ಟಾಯ್ಲೆಟ್‌ ಸೀಟುಗಳು ಅಮೆಜಾನ್‌ನಲ್ಲಿ ಮಾರಾಟಕ್ಕಿರುವುದು ಗಮನಕ್ಕೆ ಬಂದಿದ್ದು, ಅದನ್ನು ಕೂಡಲೇ ತೆಗೆದು ಹಾಕುವಂತೆ ಅಮೆಜಾನ್‌ ಸಿಇಒಗೆ ಪತ್ರ ಬರೆದಿದ್ದೇವೆ’ ಎಂದು ಸಿಖ್‌ ಒಕ್ಕೂಟದ ಹಿರಿಯ ವ್ಯವಸ್ಥಾಪಕ ಸಿಮ್‌ ಸಿಂಗ್‌ ತಿಳಿಸಿದ್ದಾರೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಮತ್ತು ಆಕ್ರಮಣಾಕಾರಿ ವ್ಯಾಪಾರಕ್ಕೆ ಕಡಿವಾಣ ಹಾಕುವಂತೆಅಮೆಜಾನ್‌ ಅಂಗಸಂಸ್ಥೆ ಮತ್ತು ಮಾರಾಟಗಾರರಿಗೆ ಸೂಚಿಸುವಂತೆಯೂ ಅವರು ಸಂಸ್ಥೆಗೆ ಮನವಿ ಮಾಡಿದ್ದಾರೆ.

ಈಗಾಗಲೇ ವೆಬ್‌ಸೈಟ್‌ಗಳಿಂದ ಕೆಲವು ಚಿತ್ರಗಳನ್ನು ತೆಗೆದು ಹಾಕಲಾಗಿದೆ. ಜತೆಗೆ, ಈ ಉತ್ಪನ್ನಗಳ ಹುಡುಕಾಟ ನಡೆಸಿದರೆ ‘ಕ್ಷಮಿಸಿ. ವೆಬ್‌ಸೈಟ್‌ ಪುಟ ಸಿಗುತ್ತಿಲ್ಲ’ ಎನ್ನುವ ಸಂದೇಶ ಬರುತ್ತದೆ ಎಂದು ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT