ಭಾನುವಾರ, 3 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಹಾ ಕುಡಿಯುವುದನ್ನು ಕಡಿಮೆ ಮಾಡಲು ಪಾಕಿಸ್ತಾನ ಜನರಿಗೆ ಸರ್ಕಾರ ಮನವಿ: ಕಾರಣವೇನು?

Last Updated 15 ಜೂನ್ 2022, 14:17 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪ್ರತಿ ದಿನ ಕುಡಿಯುವ ಚಹಾದ ಪ್ರಮಾಣ ಕಡಿಮೆ ಮಾಡಿ ಎಂದು ಪಾಕಿಸ್ತಾನದ ಜನರಿಗೆ ಅಲ್ಲಿನ ಸರ್ಕಾರ ಮನವಿ ಮಾಡಿದೆ. ಇದಕ್ಕೆ ಕಾರಣವೇನು ಗೊತ್ತೇ? ಆರ್ಥಿಕ ಬಿಕ್ಕಟ್ಟು!

ಆಮದು ವೆಚ್ಚ ಕಡಿಮೆ ಮಾಡುವುದಕ್ಕಾಗಿ ದಿನವೂ ಕಡಿಮೆ ಚಹಾ ಕುಡಿಯಿರಿ ಎಂದು ಪಾಕಿಸ್ತಾನ ಯೋಜನಾ ಸಚಿವ ಆಶ್‌ಸಾನ್ ಇಕ್ಬಾಲ್ ದೇಶದ ಜನರಲ್ಲಿ ಮನವಿ ಮಾಡಿರುವುದಾಗಿ ‘ಬಿಬಿಸಿ’ ವರದಿ ಮಾಡಿದೆ.

ವಿನಿಮಯ ದರ ಕುಸಿತದ ಪರಿಣಾಮ ಎರಡು ತಿಂಗಳಿಗಿಂತಲೂ ಕಡಿಮೆ ಅವಧಿಗೆ ಆಮದು ಮಾಡಿಕೊಳ್ಳುವಷ್ಟು ಮಾತ್ರವೇ ಪಾಕಿಸ್ತಾನದ ಬಳಿ ವಿದೇಶಿ ಕರೆನ್ಸಿ ಮೀಸಲಿದೆ. ಹೀಗಾಗಿ ಆಮದಿಗಾಗಿ ತುರ್ತು ನಿಧಿ ಸಂಗ್ರಹಿಸಬೇಕಾದ ಒತ್ತಡದಲ್ಲಿ ದೇಶವಿದೆ ಎನ್ನಲಾಗಿದೆ.

ಪಾಕಿಸ್ತಾನ ವಿಶ್ವದ ಅತಿ ದೊಡ್ಡ ಚಹಾ ಆಮದುದಾರ ದೇಶವಾಗಿದೆ. ಕಳೆದ ವರ್ಷ 60 ಕೋಟಿ ಡಾಲರ್‌ ಮೌಲ್ಯದ (ಅಂದಾಜು ₹4,686.97 ಕೋಟಿ) ಚಹಾ ಆಮದು ಮಾಡಲಾಗಿತ್ತು.

ನಾವು ಸಾಲ ಮಾಡಿ ಚಹಾವನ್ನು ಆಮದು ಮಾಡಿಕೊಳ್ಳುತ್ತಿದ್ದೇವೆ. ಹೀಗಾಗಿ ಪ್ರತಿ ದಿನ ಚಹಾ ಕುಡಿಯುವುದನ್ನು ಒಂದರಿಂದ ಎರಡು ಲೋಟದಷ್ಟು ಕಡಿಮೆ ಮಾಡುವಂತೆ ದೇಶದ ಜನರಲ್ಲಿ ಮನವಿ ಮಾಡುತ್ತಿದ್ದೇನೆ ಎಂದು ಇಕ್ಬಾಲ್ ಹೇಳಿರುವುದಾಗಿ ಪಾಕಿಸ್ತಾನದ ಮಾಧ್ಯಮ ವರದಿ ಮಾಡಿದೆ.

ವಿದ್ಯುತ್ ಉಳಿಸುವುದಕ್ಕಾಗಿ ಉದ್ಯಮ ವಹಿವಾಟುದಾರರು ರಾತ್ರಿ 8.30ರ ಒಳಗಾಗಿ ಅಂಗಡಿ–ಮುಂಗಟ್ಟುಗಳನ್ನು ಮುಚ್ಚಬೇಕು ಎಂದೂ ಅವರು ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT