ಬ್ರುಸೆಲ್ಸ್: ಯುರೋಪ್ ರಾಷ್ಟ್ರಗಳ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುವುದಕ್ಕಾಗಿ 800 ಶತಕೋಟಿ ಯುರೊ (ಅಂದಾಜು ₹7 ಸಾವಿರ ಕೋಟಿ) ಮೊತ್ತದ ಯೋಜನೆ ಜಾರಿಗೊಳಿಸಬೇಕು ಎಂಬ ಪ್ರಸ್ತಾವವನ್ನು ಐರೋಪ್ಯ ಒಕ್ಕೂಟ (ಇಯು) ಮಂಗಳವಾರ ಮುಂದಿಟ್ಟಿದೆ.

ಯುದ್ಧಪೀಡಿತ ಉಕ್ರೇನ್ಗೆ ನೀಡುತ್ತಿರುವ ಸೇನಾ ನೆರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ಅಮೆರಿಕದ ನಿರ್ಧಾರದಿಂದ ಉಂಟಾಗಬಹುದಾದ ಪರಿಣಾಮ ತಗ್ಗಿಸುವುದು ಹಾಗೂ ರಷ್ಯಾಕ್ಕೆ ಪ್ರತ್ಯುತ್ತರ ನೀಡುವುದಕ್ಕೆ ಉಕ್ರೇನ್ಗೆ ಶಕ್ತಿ ತುಂಬುವುದರ ಭಾಗವಾಗಿ ಇಂತಹ ಯೋಜನೆಗೆ ಐರೋಪ್ಯ ಒಕ್ಕೂಟ ಮುಂದಾಗಿದೆ.

‘ಒಕ್ಕೂಟದ 27 ಸದಸ್ಯ ರಾಷ್ಟ್ರಗಳ ನಾಯಕರು ಗುರುವಾರ ಬ್ರುಸೆಲ್ಸ್ನಲ್ಲಿ ಸಭೆ ಸೇರಲಿದ್ದು, ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಅಂದಿನ ಸಭೆಯಲ್ಲಿ ಮಂಡಿಸಲಾಗುವುದು’ ಎಂದು ಐರೋಪ್ಯ ಒಕ್ಕೂಟದ ಅಧ್ಯಕ್ಷೆ ಉರ್ಸುಲಾ ವಾನ್ ಡರ್ ಲೆಯೆನ್ ಹೇಳಿದ್ದಾರೆ.

‘ರಕ್ಷಣಾ ವ್ಯವಸ್ಥೆಗಳ ಖರೀದಿಗಾಗಿ ಯುರೋಪ್ ರಾಷ್ಟ್ರಗಳು ಮಾಡುವ ವೆಚ್ಚದ ಮಿತಿ ಸಡಿಲಿಸುವುದು ನಮ್ಮ ಮೊದಲ ಕಾರ್ಯ. ಒಕ್ಕೂಟದ ಸದಸ್ಯ ರಾಷ್ಟ್ರಗಳು ರಕ್ಷಣಾ ಕ್ಷೇತ್ರಕ್ಕೆ ಮಾಡುತ್ತಿರುವ ವೆಚ್ಚವನ್ನು ಶೇ 1.5ರಷ್ಟು ಹೆಚ್ಚಳ ಮಾಡಿದಲ್ಲಿ, ನಾಲ್ಕು ವರ್ಷಗಳಿಗೆ 650 ಶತಕೋಟಿ ಯುರೊ ವೆಚ್ಚ ಮಾಡಲು ಸಾಧ್ಯವಾಗಲಿದೆ’ ಎಂದು ಉರ್ಸುಲಾ ಹೇಳಿದ್ದಾರೆ.

ಯುರೋಪ್ ರಾಷ್ಟ್ರಗಳು ಈಗ ಗಂಭೀರ ಸ್ವರೂಪದ ಬೆದರಿಕೆಗಳನ್ನು ಎದುರಿಸುತ್ತಿದ್ದು ಈ ಬಗ್ಗೆ ನಾನು ವಿವರಿಸುವ ಅಗತ್ಯವಿಲ್ಲ
ಉರ್ಸುಲಾ ವಾನ್ ಡರ್ ಲೆಯೆನ್ ಐರೋಪ್ಯ ಒಕ್ಕೂಟದ ಅಧ್ಯಕ್ಷೆ

ಅಮೆರಿಕ ನೀಡಿದ ನೆರವು ಅಪಾರ

ವಾಷಿಂಗ್ಟನ್: ಉಕ್ರೇನ್ ಮೇಲೆ ರಷ್ಯಾ 2022ರ ಫೆಬ್ರುವರಿಯಲ್ಲಿ ಯುದ್ಧ ಆರಂಭಿಸಿದ ದಿನದಿಂದ ಇದುವರೆಗೆ ಅಮೆರಿಕ 65.9 ಶತಕೋಟಿ ಡಾಲರ್ (ಅಂದಾಜು ₹5 ಲಕ್ಷ ಕೋಟಿ) ಮೌಲ್ಯದ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡಿದೆ. ರಾಕೆಟ್ಗಳಿಂದ ಹಿಡಿದು ಡ್ರೋನ್ವರೆಗೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಉಕ್ರೇನ್ಗೆ ಪೂರೈಕೆ ಮಾಡಲಾಗಿದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆ ಜ.20ರಂದು ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಹೇಳಲಾಗಿದೆ. ಪೂರೈಕೆ ಮಾಡಲಾದ ರಕ್ಷಣಾ ಉಪಕರಣಗಳು/ವ್ಯವಸ್ಥೆ ವಿವರ ಹೀಗಿದೆ * ನೆಲದಿಂದ ಚಿಮ್ಮಿ ವಾಯುಪ್ರದೇಶದಲ್ಲಿನ ಗುರಿಗಳನ್ನು ನಾಶಪಡಿಸಬಲ್ಲ ಮೂರು ಪ್ಯಾಟ್ರಿಯಟ್ ಕ್ಷಿಪಣಿಗಳು * ಕಡಿಮೆ ವ್ಯಾಪ್ತಿಯಿಂದ ಹಿಡಿದು ಮಧ್ಯಮ ವ್ಯಾಪ್ತಿಯಲ್ಲಿನ ಗುರಿಗಳ ಮೇಲೆ ದಾಳಿ ಸಾಮರ್ಥ್ಯದ 12 ‘ಎನ್ಎಎಸ್ಎಎಂಎಸ್’ ಹಾಗೂ ‘ಹಾಕ್’ ಕ್ಷಿಪಣಿ ವ್ಯವಸ್ಥೆ * ‘ಸ್ಟಿಂಗರ್’ ಹೆಸರಿನ 3 ಸಾವಿರ ಯುದ್ಧವಿಮಾನ ನಿರೋಧಕ ಕ್ಷಿಪಣಿಗಳು * ವಾಯುಪ್ರದೇಶದ ಮೇಲೆ ಕಣ್ಗಾವಲಿಗಾಗಿ 21 ರೇಡಾರ್ * 200ಕ್ಕೂ ಅಧಿಕ ಹೊವಿಟ್ಜರ್ ಹಾಗೂ 30 ಲಕ್ಷ ಸುತ್ತು ಮದ್ದುಗುಂಡು (150ಎಂಎಂ). 105 ಎಂಎಂನ 72 ಹೊವಿಟ್ಜರ್ ಹಾಗೂ 10 ಲಕ್ಷ ಸುತ್ತು ಮದ್ದುಗುಂಡು * 10 ಸಾವಿರಕ್ಕೂ ಅಧಿಕ ಟ್ಯಾಂಕ್ ನಿರೋಧಕ ‘ಜಾವೆಲಿನ್: ಕ್ಷಿಪಣಿಗಳು 10 ಸಾವಿರಕ್ಕೂ ಹೆಚ್ಚು ಟಿಒಡಬ್ಲ್ಯು ಟ್ಯಾಂಕ್ ನಿರೋಧಕ ಕ್ಷಿಪಣಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.