ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊನಲಿಸಾ ಕಲಾಕೃತಿ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗಿದ ಪರಿಸರವಾದಿಗಳು

Published 28 ಜನವರಿ 2024, 12:57 IST
Last Updated 28 ಜನವರಿ 2024, 12:57 IST
ಅಕ್ಷರ ಗಾತ್ರ

ಪ್ಯಾರಿಸ್‌(ಫ್ರೆಂಚ್‌): ವಿಶ್ವ ಪ್ರಸಿದ್ಧ ಕಲಾಕೃತಿ ಮೊನಾಲಿಸಾದ ರಕ್ಷಣಾ ಪರದೆ ಮೇಲೆ ಸೂಪ್‌ ಚೆಲ್ಲಿ ಘೋಷಣೆ ಕೂಗುವ ಮೂಲಕ ಪರಿಸರವಾದಿಗಳಿಬ್ಬರು ಪ್ರತಿಭಟನೆ ನಡೆಸಿದ್ದಾರೆ.

ಘಟನೆಗೆ ಸಂಬಂಧಪಟ್ಟ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇಬ್ಬರು ಮಹಿಳೆಯರು ಕಲಾಕೃತಿ ಪಕ್ಕದಲ್ಲಿ ಒಂದು ಕೈ ಎತ್ತಿ ನಿಂತಿದ್ದಾರೆ. ಅವರ ಟೀ–ಶರ್ಟ್‌ ಮೇಲೆ FOOD RIPOSTE ಎಂದು ಬರೆದಿರುವುದು ಕಾಣಬಹುದಾಗಿದೆ.

‘ಯಾವುದು ಮುಖ್ಯ ನಮಗೆ? ಕಲಾಕೃತಿಯೋ? ಆರೋಗ್ಯಕರ, ಸುಸ್ಥಿರ ಆಹಾರ ಪದ್ಧತಿ ಹೊಂದುವುದೋ?’ ಎಂದು ಅವರು ಕೂಗಿದ್ದಾರೆ.

‘ದೇಶದ ಕೃಷಿ ವ್ಯವಸ್ಥೆ ಅಧಃಪತನಕ್ಕೆ ಇಳಿದಿದೆ. ನಮ್ಮ ರೈತರು ಸಾಯುತ್ತಿದ್ದಾರೆ’ ಎಂದು ಹೇಳಿದ್ದಾರೆ.

‘ಜಾಗತಿಕ ತಾಪಮಾನ ನಿಯಮಗಳನ್ನು ಫ್ರೆಂಚ್‌ ಸರ್ಕಾರ ಮುರಿಯುತ್ತಿದೆ. ರೈತರಿಗೆ ಉತ್ತಮ ಆದಾಯ ನೀಡುವ ಮೂಲಕ ಜನರಿಗೆ ಆರೋಗ್ಯಕರವಾದ ಆಹಾರ ಒದಗಿಸುವ ಕೆಲಸವನ್ನು ಫ್ರೆಂಚ್‌ ಸರ್ಕಾರ ಮಾಡಬೇಕಿದೆ’ ಎಂದು FOOD RIPOSTE ಗ್ರೂಪ್‌ ತನ್ನ ವೆಬ್‌ಸೈಟ್‌ನಲ್ಲಿ ಬರೆದುಕೊಂಡಿದೆ.

ಕಡಿಮೆ ಕೂಲಿ, ಆಮದು ವಿರುದ್ಧ ಫ್ರೆಂಚ್‌ ರೈತರು ದೇಶದಾದ್ಯಂತ ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರ ಪ್ರತಿಭಟನೆ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT