ಶನಿವಾರ, 2 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಟಿನ್‌ ಆರೋಗ್ಯವಾಗಿದ್ದಾರೆ’: ಹೃದಯಸ್ತಂಭನ ವದಂತಿ ಅಲ್ಲಗಳೆದ ರಷ್ಯಾ ಸರ್ಕಾರ

Published 24 ಅಕ್ಟೋಬರ್ 2023, 11:02 IST
Last Updated 24 ಅಕ್ಟೋಬರ್ 2023, 11:02 IST
ಅಕ್ಷರ ಗಾತ್ರ

ಮಾಸ್ಕೊ: ರಷ್ಯಾ ಅಧಕ್ಷ ವ್ಲಾಡಿಮಿರ್‌ ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಕ್ರೆಮ್ಲಿನ್‌ ಮಾಹಿತಿ ನೀಡಿದೆ.

‘ಪುಟಿನ್‌ ಅವರಿಗೆ ಹೃದಯಸ್ತಂಭನ ಉಂಟಾಗಿದ್ದು, ಅವರು ಕುಸಿದುಬಿದ್ದಿದ್ದಾರೆ’ ಎಂಬ ವದಂತಿಗೆ ರಷ್ಯಾ ಸರ್ಕಾರ ಕ್ರೆಮ್ಲಿನ್‌ ತೆರೆ ಎಳೆದಿದ್ದು, ಎಲ್ಲವೂ ಸುಳ್ಳು ಪುಟಿನ್‌ ಸ್ವಾಸ್ಥ್ಯವಾಗಿದ್ದಾರೆ ಎಂದು ಹೇಳಿದೆ.

ರಷ್ಯಾದ ಟೆಲಿಗ್ರಾಮ್ ಚಾನೆಲ್‌ನ ಮೂಲರಹಿತ ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್‌ ಅವರು, ಪುಟಿನ್‌ ಚೆನ್ನಾಗಿಯೇ ಇದ್ದಾರೆ ಎಂದಿದ್ದಾರೆ. ಈ ಮೂಲಕ ವದಂತಿಗಳನ್ನು ಅಲ್ಲಗಳೆದಿದ್ದಾರೆ.

ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಅವರು ಬಾಡಿ ಡಬಲ್‌ ಅನ್ನು ಬಳಸುತ್ತಾರೆ ಎನ್ನುವ ಸುದ್ದಿಗೆ ಉತ್ತರಿಸಿದ ಅವರು, ‘ಇದು ಅಸಂಬದ್ಧ ಮಾಹಿತಿ, ಇಡೀ ಮಾಧ್ಯಮವು ಇದರ ಬಗ್ಗೆ ಚರ್ಚಿಸುತ್ತಿದೆ. ಇದು ನಗೆಯನ್ನು ಹೊರತುಪಡಿಸಿ ಏನನ್ನೂ ಉಂಟುಮಾಡುವುದಿಲ್ಲ’ ಎಂದಿದ್ದಾರೆ.

2020 ರ ಸಂದರ್ಶನವೊಂದರಲ್ಲಿ, ಪುಟಿನ್ ಅವರು ಬಾಡಿ ಡಬಲ್ಸ್ ಅನ್ನು ಬಳಸುತ್ತಾರೆ ಎಂಬ ವದಂತಿಗಳನ್ನು ಅಲ್ಲಗಳೆದಿದ್ದರು. ಆದರೂ ಭದ್ರತಾ ಕಾರಣಗಳಿಗಾಗಿ ಈ ಹಿಂದೆ ಒಂದನ್ನು ಬಳಸುವ ಅವಕಾಶವನ್ನು ನೀಡಲಾಗಿತ್ತು ಎಂದಿದ್ದರು ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT