ವಾಷಿಂಗ್ಟನ್: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಯನ್ನು ಕ್ವಾಡ್ ಸದಸ್ಯ ರಾಷ್ಟ್ರಗಳು ಮಂಗಳವಾರ ಖಂಡಿಸಿವೆ.

ಭಾರತ, ಅಮೆರಿಕ, ಜಪಾನ್ ಮತ್ತು ಆಸ್ಟ್ರೇಲಿಯಾ 'ಕ್ವಾಡ್' ಸದಸ್ಯ ರಾಷ್ಟ್ರಗಳಾಗಿವೆ.

ಪಹಲ್ಗಾಮ್ನಲ್ಲಿ ಇದೇ ವರ್ಷ ಏಪ್ರಿಲ್ 22ರಂದು ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ 26 ಪ್ರವಾಸಿಗರು ಮೃತಪಟ್ಟಿದ್ದರು. ಅದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪಾಕಿಸ್ತಾನ ಹಾಗೂ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರರ ನೆಲೆಗಳ ಮೇಲೆ ಮೇ 7ರಂದು 'ಆಪರೇಷನ್ ಸಿಂಧೂರ' ನಡೆಸಿದ್ದವು. ಅದರ ಬೆನ್ನಲ್ಲೇ, ಎರಡೂ ರಾಷ್ಟ್ರಗಳ ನಡುವೆ ಸಂಘರ್ಷ ಆರಂಭವಾಗಿತ್ತು.

ವಾಷಿಂಗ್ಟನ್ನಲ್ಲಿ ನಡೆಯುತ್ತಿರುವ 'ಕ್ವಾಡ್' ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯಲ್ಲಿ ಅಮೆರಿಕ ವಿದೇಶಾಂಗ ಸಚಿವಾಲಯವು, ಪಹಲ್ಗಾಮ್ ದಾಳಿ ಕುರಿತು ಜಂಟಿ ಹೇಳಿಕೆ ಬಿಡುಗಡೆ ಮಾಡಿದೆ. ದಾಳಿಯನ್ನು ಖಂಡಿಸಲಾಗಿದೆಯಾದರೂ, ಪಾಕಿಸ್ತಾನವನ್ನು ಹೆಸರಿಸಿಲ್ಲ ಅಥವಾ ನೇರವಾಗಿ ದೂಷಿಸಿಲ್ಲ.

'ಗಡಿಯಾಚಿನ ಭಯೋತ್ಪಾದನೆ, ಉಗ್ರ ಚಟುವಟಿಕೆಗಳು ಸೇರಿದಂತೆ ಯಾವುದೇ ರೀತಿಯ ಹಿಂಸಾಕೃತ್ಯಗಳನ್ನು ಕ್ವಾಡ್ ನಿಸ್ಸಂದೇಹವಾಗಿ ಖಂಡಿಸುತ್ತದೆ' ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

ಇಂತಹ ಖಂಡನೀಯ ಕತ್ಯವೆಸಗಿದವರು, ಸಂಘಟನೆಗಳು, ಅವರಿಗೆ ಹಣಕಾಸು ನೆರವು ನೀಡುತ್ತಿರುವವರನ್ನು ನ್ಯಾಯಾಂಗದೆದುರು ನಿಲ್ಲಿಸಲು ವಿಶ್ವಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳು ಸಂಬಂಧಪಟ್ಟ ಆಡಳಿತಗಳಿಗೆ ಸಕ್ರಿಯವಾಗಿ ಸಹಕರಿಸುವಂತೆ ಕರೆ ನೀಡಲಾಗಿದೆ.

ಏಷ್ಯಾದಲ್ಲಿ ಏರುತ್ತಿರುವ ಚೀನಾದ ಪ್ರಭಾವವನ್ನು ಎದುರಿಸಲು ಪ್ರಯತ್ನಿಸುತ್ತಿರುವ ಅಮೆರಿಕಕ್ಕೆ ಭಾರತದ ಸಹಕಾರ ಅತ್ಯಗತ್ಯವಾಗಿದೆ. ಏತನ್ಮಧ್ಯೆ, ಪಾಕಿಸ್ತಾನವೂ ಅಮೆರಿಕದ ಮಿತ್ರರಾಷ್ಟ್ರವಾಗಿದೆ.

ಕದನ ವಿರಾಮ ಘೋಷಿಸಿದ್ದ ಟ್ರಂಪ್
ಆಪರೇಷನ್ ಸಿಂಧೂರಕ್ಕೆ ಪ್ರತಿಯಾಗಿ ಪಾಕ್ ಪಡೆಗಳು ಭಾರತದ ಮೇಲೆ ದಾಳಿ ಆರಂಭಿಸಿದ್ದವು. ಇದನ್ನು ಭಾರತೀಯ ಪಡೆಗಳು ಹಿಮ್ಮೆಟ್ಟಿಸಿದ್ದವು. ಆದರೆ, ಮೇ 10ರಂದು ಕದನ ವಿರಾಮ ಘೋಷಣೆಯಾಗುವವರೆಗೆ ಉಭಯ ದೇಶಗಳ ನಡುವೆ ಸಂಘರ್ಷ ಉಲ್ಬಣಿಸಿತ್ತು.

ಉಭಯ ದೇಶಗಳು ಮೇ 10ರಂದು ಕದನ ವಿರಾಮ ಒಪ್ಪಂದಕ್ಕೆ ಬಂದಿದ್ದವು. ಇದನ್ನು ಮೊದಲು ಘೋಷಣೆ ಮಾಡಿದ್ದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್.

ಮೂರನೇ ರಾಷ್ಟ್ರದ ಮಧ್ಯಸ್ಥಿಕೆಯನ್ನು ಭಾರತ ನಿರಾಕರಿಸಿದ್ದರೂ, ಟ್ರಂಪ್ ಮಾತ್ರ ಯುದ್ಧ ನಿಲ್ಲಿಸಿದ್ದು ತಾವೇ ಎಂದು ಪದೇ ಪದೇ ಹೇಳಿಕೊಂಡಿದ್ದರು.
.ಪಹಲ್ಗಾಮ್ ದಾಳಿಯ ಉದ್ದೇಶ ಪ್ರವಾಸೋದ್ಯಮ ನಾಶ: ಜೈಶಂಕರ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.