ಕೀವ್: ಉಕ್ರೇನ್ ಮೇಲಿನ ದಾಳಿಯನ್ನು ರಷ್ಯಾ ಮುಂದುವರಿಸಿದ್ದು, 24 ಗಂಟೆಗಳಲ್ಲಿ ಮೂರು ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ದಾಳಿಯಲ್ಲಿ 9 ಮಂದಿ ಮೃತಪಟ್ಟು, 53ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್ ಅಧಿಕಾರಿಗಳನ್ನು ಉಲ್ಲೇಖಿಸಿ ಯೂರೊ ನ್ಯೂಸ್ ವರದಿ ಮಾಡಿದೆ.

ಶುಕ್ರವಾರದಿಂದ ಶನಿವಾರದವರೆಗೆ ರಷ್ಯಾ ಕೆಎಚ್–47ಎಂ2 ‘ಕಿಂಝಾಲ್’ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿದೆ. ಯುರೊ ನ್ಯೂಸ್ ಪ್ರಕಾರ, ಕ್ರೈಮಿಯಾದಿಂದ 135 ವಿಭಿನ್ನ ಸ್ಟ್ರೈಕ್ ಡ್ರೋನ್ಗಳನ್ನು ಸಹ ಉಡಾಯಿಸಲಾಗಿದೆ.

ಉಕ್ರೇನ್ನ 13 ಸ್ಥಳಗಳ ಮೇಲೆ ಡ್ರೋನ್ ದಾಳಿ ನಡೆದಿದೆ.

ಶುಕ್ರವಾರ ಉಕ್ರೇನ್ ರಾಜಧಾನಿ ಕೀವ್ ಮೇಲೆ ದಾಳಿ ನಡೆಸಿದ್ದ ರಷ್ಯಾ 7 ಜನರನ್ನು ಕೊಂದಿತ್ತು. 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಈ ಮಧ್ಯೆ, ಖೇರ್ಸನ್ನ ದಕ್ಷಿಣ ಪ್ರದೇಶದ 34 ಸಮುದಾಯಗಳು ದಾಳಿಗೆ ಒಳಗಾದವು. ಡೊನೆಟ್ಸ್ಕ್ ಪ್ರದೇಶದಲ್ಲಿ, ಕ್ರಾಮಾಟೋರ್ಸ್ಕ್ ನಗರದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ ಎಂದು ಗವರ್ನರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.