ಮಾಸ್ಕೋ: ‘ಉಕ್ರೇನ್ ಮೇಲೆ ಯುದ್ಧ ಮಾಡುವ ಉದ್ದೇಶವಿಲ್ಲ’ ಎಂದು ರಷ್ಯಾದ ಉನ್ನತ ರಾಜತಾಂತ್ರಿಕರು ಶುಕ್ರವಾರ ಹೇಳಿದ್ದಾರೆ. ಆದರೆ ನಮ್ಮ ಭದ್ರತಾ ಹಿತಾಸಕ್ತಿಗಳಿಗೆ ಧಕ್ಕೆ ತರಲು ಪಾಶ್ಚಾತ್ಯ ರಾಷ್ಟ್ರಗಳಿಗೆ ಅವಕಾಶ ನೀಡುವುದಿಲ್ಲ ಎಂದೂ ರಷ್ಯಾ ಸ್ಪಷ್ಟಪಡಿಸಿದೆ.

ಇದನ್ನೂ ಓದಿ:Explainer| ಏನಿದು ಉಕ್ರೇನ್-ರಷ್ಯಾ ಸಂಘರ್ಷ? ಭಾರತಕ್ಕೆ ಯಾಕೆ ಕಳವಳ?

‘ಫೆಬ್ರುವರಿಯಲ್ಲಿ ರಷ್ಯಾ ಮಿಲಿಟರಿಯು ಉಕ್ರೇನ್ ಮೇಲೆ ಆಕ್ರಮಣ ನಡೆಸುವ ಸಾಧ್ಯತೆ ಇದೆ’ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಉಕ್ರೇನ್ ಅಧ್ಯಕ್ಷರಿಗೆ ಗುರುವಾರವಷ್ಟೇ ಎಚ್ಚರಿಕೆ ನೀಡಿದ್ದರು. ಈ ಮಧ್ಯೆ ತನಗೆ ಯುದ್ಧದ ಉದ್ದೇಶವಿಲ್ಲ ಎಂದು ರಷ್ಯಾ ತಿಳಿಸಿದೆ.

‘ರಷ್ಯಾ ಒಕ್ಕೂಟ ವ್ಯವಸ್ಥೆಯನ್ನು ಅವಲಂಬಿಸಿರುವವರೆಗೆ ಯುದ್ಧ ನಡೆಯುವುದಿಲ್ಲ. ನಮಗೆ ಯುದ್ಧ ಬೇಕಾಗಿಯೂ ಇಲ್ಲ’ ಎಂದು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ರಷ್ಯಾದ ರೇಡಿಯೊಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ‘ಆದರೆ ನಮ್ಮ ಹಿತಾಸಕ್ತಿಗಳಿಗೆ ಧಕ್ಕೆಯಾಗಲು ನಾವು ಬಿಡುವುದಿಲ್ಲ’ ಎಂದು ಅವರು ಹೇಳಿದರು.

ಇದನ್ನೂ ಓದಿ:ಉಕ್ರೇನ್ ವಿರುದ್ಧ ಯುದ್ಧವೆಂಬ ಚಿಂತನೆಯೂ ಸ್ವೀಕಾರಾರ್ಹವಲ್ಲ: ರಷ್ಯಾ

ರಷ್ಯಾ ಉಕ್ರೇನ್ ಗಡಿಯಲ್ಲಿ 1,00,000 ಕ್ಕಿಂತಲೂ ಅಧಿಕ ಸೇನಾ ತುಕಡಿಗಳನ್ನು ನಿಯೋಜಿಸಿದೆ. ಹೀಗಾಗಿ ಯುದ್ಧಭೀತಿ ತೀವ್ರಗೊಂಡಿದೆ. ರಷ್ಯಾದ ಸೇನಾ ನಿಯೋಜನೆಯು ಇತ್ತ, ಅಮೆರಿಕ ಮತ್ತು ನ್ಯಾಟೋ ಪಡೆಗಳ ಹುಬ್ಬೇರುವಂತೆ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.