ಮಾಸ್ಕೊ: ಉಕ್ರೇನ್ ಜೊತೆ ಗಡಿ ಹಂಚಿಕೊಂಡಿರುವ ಕರ್ಸ್ಕ್ ಪ್ರಾಂತ್ಯದ 9 ಜಿಲ್ಲೆಗಳಲ್ಲಿ ಸುಮಾರು 1.21 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ರಷ್ಯಾ ಹೇಳಿದೆ.
ತುರ್ತು ಸೇವೆಗಳ ಸಚಿವಾಲಯ ಈ ಮಾಹಿತಿ ನೀಡಿರುವುದಾಗಿ 'ಟಿಎಎಸ್ಎಸ್' ಸುದ್ದಿಸಂಸ್ಥೆ ಸೋಮವಾರ ವರದಿ ಮಾಡಿದೆ.
ಉಭಯ ದೇಶಗಳ ಸೇನೆಗಳು ಕರ್ಸ್ಕ್ ಪ್ರಾಂತ್ಯದಲ್ಲಿ ಆಗಸ್ಟ್ 6ರಿಂದ ಕಾಳಗ ನಡೆಸುತ್ತಿವೆ. ಪಶ್ಚಿಮ ಗಡಿಯಲ್ಲಿ ಉಕ್ರೇನ್ ಪಡೆಗಳು ಮೇಲುಗೈ ಸಾಧಿಸಿರುವುದು, ರಷ್ಯಾಗೆ ಭಾರಿ ಮುಜುಗರವನ್ನುಂಟುಮಾಡಿದೆ.
ಏತನ್ಮಧ್ಯೆ, ಉಕ್ರೇನ್ ಆಡಳಿತ ಸಹ ತನ್ನ ನಾಗರಿಕರಿಗೆ 'ಪೊಕ್ರೋವಸ್ಕ್' ನಗರ ತೊರೆಯುವಂತೆ ಆದೇಶಿಸಿದೆ. ರಷ್ಯಾ ಸೇನೆ ಈ ಭಾಗದಲ್ಲಿ ಆಕ್ರಮಣ ತೀವ್ರಗೊಳಿಸಿ ಮುನ್ನುಗ್ಗುತ್ತಿದೆ.
ಪೊಕ್ರೋವಸ್ಕ್ ನಗರದಲ್ಲಿ ಸುಮಾರು 53,000 ಜನರು ವಾಸವಾಗಿದ್ದಾರೆ.