ಮಾಸ್ಕೊ: ‘ರಷ್ಯಾ–ಉಕ್ರೇನ್ ಸಂಘರ್ಷ ಕೊನೆಗೊಳಿಸಿ, ಶಾಂತಿ ಸ್ಥಾಪಿಸುವ ಮಾತುಕತೆಯೂ ಸ್ಥಗಿತಗೊಂಡಿದ್ದು, ಐರೋಪ್ಯ ದೇಶಗಳು ಈ ಪ್ರಕ್ರಿಯೆಗೆ ಅಡ್ಡಿಪಡಿಸುತ್ತಿವೆ’ ಎಂದು ರಷ್ಯಾ ಶುಕ್ರವಾರ ತಿಳಿಸಿದೆ.

ಮಾತುಕತೆಗೆ ರಷ್ಯಾವೂ ಈಗಲೂ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದೆ.

ರಷ್ಯಾ ಹಾಗೂ ಉಕ್ರೇನ್ನ ಸಂಧಾನಕಾರರು ಈ ವರ್ಷದಲ್ಲಿ ಇಸ್ತಾಂಬುಲ್ನಲ್ಲಿ ಮೂರು ಸುತ್ತಿನ ಮಾತುಕತೆ ನಡೆಸಿದ್ದರು. ಜುಲೈ 23ರಂದು ನಡೆದ ಕೊನೆಯ ಮಾತುಕತೆಯಲ್ಲಿ ಯುದ್ಧದಲ್ಲಿ ಸಿಕ್ಕಿಬಿದ್ದ ಯುದ್ಧ ಕೈದಿಗಳು ಹಾಗೂ ಮೃತಪಟ್ಟ ಯೋಧರ ದೇಹಗಳ ಹಸ್ತಾಂತರ ಸಂಬಂಧ ಹಲವು ಮಾತುಕತೆಗಳು ನಡೆದಿದ್ದವು.

ಉಕ್ರೇನ್ ‘ವಾಸ್ತವ ಸ್ಥಿತಿಗಳನ್ನು ಒಪ್ಪಿಕೊಳ್ಳುತ್ತಿಲ್ಲ’ ಎಂದು ರಷ್ಯಾ ಆರೋಪಿಸಿದೆ. ತನಗೆ ಸೇರಿದ ಜಾಗವನ್ನು ವಶಕ್ಕೆ ಪಡೆಯಲು ರಷ್ಯಾವು ಹೆಚ್ಚು ಆಸಕ್ತಿ ತೋರಿಸುತ್ತಿದೆ ಎಂದು ಉಕ್ರೇನ್ ದೂರಿದೆ.

ಈ ಮಧ್ಯೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಭಯ ರಾಷ್ಟ್ರಗಳ ನಡುವೆ ಕದನ ವಿರಾಮ ಒಪ್ಪಂದ ಏರ್ಪಡಿಸಲು ನಡೆಸಿದ ಪ್ರಯತ್ನಗಳು ಕೂಡ ಫಲ ನೀಡಿಲ್ಲ.

‘ಮಾತುಕತೆಯ ಮಾರ್ಗವೂ ಸಿದ್ಧಗೊಂಡಿದ್ದು, ಕಾರ್ಯನಿರ್ವಹಿಸುತ್ತಿವೆ. ಆದರೆ, ಯುರೋಪ್ ರಾಷ್ಟ್ರಗಳು ಇದಕ್ಕೆ ಅಡ್ಡಿಯಾಗುತ್ತಿವೆ’ ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.