ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕಕ್ಕೆ ರಷ್ಯಾ ಎಚ್ಚರಿಕೆ

Published 20 ಮಾರ್ಚ್ 2024, 14:04 IST
Last Updated 20 ಮಾರ್ಚ್ 2024, 14:04 IST
ಅಕ್ಷರ ಗಾತ್ರ

ಮಾಸ್ಕೊ: ಅಮೆರಿಕದ ಗುಪ್ತಚರ ದಳವು ‘ಸ್ಪೇಸ್‌ ಎಕ್ಸ್‌’ನಂಥ ವಾಣಿಜ್ಯ ಉಪಗ್ರಹ ನಿರ್ವಾಹಕರನ್ನು ಬಳಕೆ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ರಷ್ಯಾ ಉಪಗ್ರಹಗಳನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆ ನಡೆಸುವುದಕ್ಕೆ ಅಮೆರಿಕ ಖಾಸಗಿ ಕಂಪನಿಗಳನ್ನು ಬಳಸಿಕೊಳ್ಳುತ್ತಿದೆ ಎಂಬುದು ಇದರಿಂದ ಗೊತ್ತಾಗುತ್ತದೆ ಎಂದು ರಷ್ಯಾ ಎಚ್ಚರಿಸಿದೆ.

‘ಅಮೆರಿಕವು ತನ್ನ ಮಹತ್ವಾಕಾಂಕ್ಷೆ ಸಾಧಿಸಲು ಖಾಸಗಿ ವಲಯಗಳನ್ನು ಆಕರ್ಷಿಸುತ್ತಿದೆ ಎಂಬ ವಿಚಾರ ನಮಗೆ ತಿಳಿದಿದೆ’ ಎಂದು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರ ಮರಿಯಾ ಜಾಖರೋವಾ ತಿಳಿಸಿದರು.

ಅಮೆರಿಕ ಗುಪ್ತಚರ ದಳದೊಂದಿಗಿನ ಒಪ್ಪಂದದ ಪ್ರಕಾರ ಸ್ಪೇಸ್‌ ಎಕ್ಸ್‌ ಸಂಸ್ಥೆಯು ನೂರಾರು ಬೇಹುಗಾರಿಕಾ ಉಪಗ್ರಹಗಳೊಂದಿಗೆ ಸಂಪರ್ಕ ಸಾಧಿಸಿದೆ ಎಂದು ರಾಯಿಟರ್ಸ್‌ ಇತ್ತೀಚೆಗೆ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT