ಕೀವ್: ಭಾನುವಾರ ರಾತ್ರಿಯಿಂದ ಉಕ್ರೇನ್ನ ಮೇಲೆ ರಷ್ಯಾವು ನಿರಂತರ ಡ್ರೋನ್ ಹಾಗೂ ಕ್ಷಿಪಣಿ ದಾಳಿ ನಡೆಸಿದ್ದು, ಕನಿಷ್ಠ 4 ಮಂದಿ ಮೃತಪಟ್ಟಿದ್ದಾರೆ.

ಕಳೆದ ತಿಂಗಳು ಉಕ್ರೇನ್ ಮೇಲೆ ನಡೆದಿದ್ದ ಬಾಂಬ್ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದರು. ಆ ಬಳಿಕ ನಡೆದ ಬಹುದೊಡ್ಡ ದಾಳಿ ಇದಾಗಿದೆ.

‘ಕೀವ್ನ ವಸತಿ ಪ್ರದೇಶಗಳು, ನಾಗರಿಕ ಮೂಲಸೌಕರ್ಯ ಪ್ರದೇಶ, ವೈದ್ಯಕೀಯ ಕೇಂದ್ರ, ಕಿಂಡರ್ಗಾರ್ಡನ್ ಸೇರಿದಂತೆ ರಾಜಧಾನಿಯ 20ಕ್ಕೂ ಅಧಿಕ ಸ್ಥಳಗಳ ಮೇಲೆ ರಾತ್ರಿಯಿಡೀ ದಾಳಿ ನಡೆಸಲಾಗಿದೆ’ ಎಂದು ಕೀವ್ನ ಮೇಯರ್ ವೈಟಲಿ ಕ್ಲಿಟ್ಸ್ಕೊ ತಿಳಿಸಿದ್ದಾರೆ.

ರಷ್ಯಾವು ಸ್ಫೋಟಕ ಹೊಂದಿದ 595 ಡ್ರೋನ್ ಹಾಗೂ 48 ಕ್ಷಿಪಣಿಗಳಿಂದ ದಾಳಿ ನಡೆಸಿದ್ದು, ಈ ಪೈಕಿ 566 ಡ್ರೋನ್, 45 ಕ್ಷಿಪಣಿಗಳನ್ನು ತಡೆಯಲಾಗಿದೆ ಎಂದು ಉಕ್ರೇನ್ನ ವಾಯುಪಡೆಯು ತಿಳಿಸಿದೆ.

‘ಕೇವಲ ಸೇನಾ ಕೇಂದ್ರಗಳನ್ನು ಗುರಿಯಾಗಿರಿಸಿಕೊಂಡು ನಾವು ದಾಳಿ ನಡೆಸಿದ್ದೇವೆ’ ಎಂದು ರಷ್ಯಾದ ಅಧಿಕಾರಿಗಳು ತಿಳಿಸಿದ್ದಾರೆ.

‘ರಾತ್ರಿಯಿಡೀ, ಉಕ್ರೇನ್ನ 41 ಡ್ರೋನ್ಗಳನ್ನು ಹೊಡೆದುರುಳಿಸಿದ್ದೇವೆ’ ಎಂದು ರಷ್ಯಾದ ರಕ್ಷಣಾ ಸಚಿವಾಲಯವು ತಿಳಿಸಿದೆ.

ಟೊಮಾಹಾಕ್ ಕ್ಷಿಪಣಿ ಮಾರಾಟ ಚಿಂತನೆ: ‘ಉಕ್ರೇನ್ಗೆ ಟೊಮಾಹಾಕ್ ಕ್ಷಿಪಣಿ ಮಾರಾಟ ಮಾಡುವ ಕುರಿತು ಚಿಂತನೆ ನಡೆಸಲಾಗಿದೆ’ ಎಂದು ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ತಿಳಿಸಿದ್ದಾರೆ.

‘ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಮನವಿಯಂತೆ, ಕ್ಷಿಪಣಿ ಮಾರಾಟ ಮಾಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ’ ಎಂದು ‘ಫಾಕ್ಸ್’ ನ್ಯೂಸ್ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ. ಟೊಮಾಹಾಕ್ ಕ್ಷಿಪಣಿಯು 1 ಸಾವಿರದಿಂದ 1,600 ಕಿ.ಮೀ ದೂರ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದು, ರಷ್ಯಾ ರಾಜಧಾನಿ ಮಾಸ್ಕೊ ಗುರಿಯಾಗಿರಿಸಿಕೊಂಡು ದಾಳಿ ನಡೆಸಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.