ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಡೆಸಾ ಮೇಲೆ ಕ್ಷಿಪಣಿ ದಾಳಿ: 14 ಜನರಿಗೆ ಗಾಯ

ಖಾಸಗಿ ಕಂಪನಿಯ ಗೋದಾಮಿಗೆ ಬೆಂಕಿ
Published 2 ಮೇ 2024, 13:46 IST
Last Updated 2 ಮೇ 2024, 13:46 IST
ಅಕ್ಷರ ಗಾತ್ರ

ಕೀವ್‌: ದಕ್ಷಿಣ ಉಕ್ರೇನ್‌ನ ಬಂದರು ನಗರಿ ‌ಒಡೆಸಾ ಮೇಲೆ ರಷ್ಯಾ‌ ನಡೆಸಿದ ಖಂಡಾಂತರ ಕ್ಷಿಪಣಿ ದಾಳಿಯಲ್ಲಿ 14 ಜನರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ಉಕ್ರೇನ್‌ನ ಅತಿದೊಡ್ಡ ಖಾಸಗಿ ವಿತರಣಾ ಕಂಪನಿ ನೋವಾ ಪೋಷ್ಟಾಗೆ ಸೇರಿದ ಬೃಹತ್ ಗೋದಾಮನ್ನು ‌ಗುರಿಯಾಗಿಸಿಕೊಂಡು ‌ಸಹ ಕ್ಷಿಪಣಿ ದಾಳಿ ನಡೆದಿದ್ದು, ಈ ವೇಳೆ ಯಾವೊಬ್ಬ ಸಿಬ್ಬಂದಿಯು ಗಾಯಗೊಂಡಿಲ್ಲ ಎಂದು ಕಂಪನಿ ತಿಳಿಸಿದೆ. ಆದರೆ ಗೋದಾಮಿಗೆ ಬೆಂಕಿ ಬಿದ್ದಿದ್ದು, ವ್ಯಾಪಕ ಪ್ರಮಾಣದಲ್ಲಿ ಆವರಿಸಿಕೊಂಡಿದೆ.

ಒಡೆಸಾ ನಗರದ ಮೇಲೆ ವಾರದ ಅವಧಿಯಲ್ಲಿ ನಡೆದ ಮೂರನೇ ದಾಳಿ ಇದಾಗಿದೆ. ಸೋಮವಾರ ನಡೆದ ದಾಳಿಯಲ್ಲಿ ಆರು ಜನರು ಮೃತಪಟ್ಟಿದ್ದರು. ನಂತರ ಎರಡು ದಿನಗಳ ಬಳಿಕ ನಾಗರಿಕ ಮೂಲಸೌಕರ್ಯಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಮೂವರು ಮೃತಪಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT