ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮನ್ನು ʼಹಂತಕʼ ಎಂದು ಕರೆದಿದ್ದರ ಬಗ್ಗೆ ತಾವು ಹೆಚ್ಚು ಚಿಂತಿಸಿಲ್ಲ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಹೇಳಿದ್ದಾರೆ.

ʼನನ್ನ ಆಡಳಿತಾವಧಿಯಲ್ಲಿ, ಎಲ್ಲಾ ರೀತಿಯ ಕಾರಣಗಳು ಮತ್ತು ನೆಪಗಳಿಂದಾಗಿ ನಾನು ಎಲ್ಲಾ ಆಯಾಮಗಳಿಂದ, ಕ್ಷೇತ್ರಗಳಿಂದ ದಾಳಿ ಎದುರಿಸಿದ್ದೇನೆ. ಇದ್ಯಾವುದೂ ನನ್ನನ್ನು ಅಚ್ಚರಿಗೊಳಿಸಿಲ್ಲʼ ಎಂದು ಪುಟಿನ್ ಹೇಳಿರುವುದಾಗಿ ಅಮೆರಿಕ ಸುದ್ದಿ ಸಂಸ್ಥೆ ‘ಎನ್‌ಬಿಸಿ‘ ವರದಿ ಮಾಡಿದೆ. ಪುಟಿನ್ ಮುಂದಿನವಾರ ಬೈಡನ್ ಅವರೊಂದಿಗೆ ಸಭೆ ನಡೆಸಲಿದ್ದಾರೆ. ಈ ಹಿನ್ನಲೆಯಲ್ಲಿ ಎನ್‌ಬಿಸಿ ಸಂದರ್ಶನ ನಡೆಸಿತ್ತು.

ಈವೇಳೆ ರಷ್ಯಾ-ಅಮೆರಿಕ ದ್ವಿಪಕ್ಷೀಯಸಂಬಂಧದ ಬಗ್ಗೆ ಮಾತನಾಡಿರುವ ಅವರು, ಇತ್ತೀಚಿನ ವರ್ಷಗಳಲ್ಲಿ ಉಭಯ ರಾಷ್ಟ್ರಗಳ ಸಂಬಂಧ ತೀರಾ ಕೆಳಮಟ್ಟದಲ್ಲಿದೆಎಂದಿದ್ದಾರೆ.

ಅಮೆರಿಕದ ಮಾಜಿ ಅಧ್ಯಕ್ಷ ಟ್ರಂಪ್ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಪುಟಿನ್, ಬೈಡನ್ ಅವರಿಗಿಂತ ಟ್ರಂಪ್‌ಸಂಪೂರ್ಣ ವರ್ಣರಂಜಿತ ವ್ಯಕ್ತಿತ್ವ ಹೊಂದಿದ್ದಾರೆಎಂದೂ ಹೇಳಿದ್ದಾರೆ.

ಇದನ್ನೂ ಓದಿ:ಆಳ–ಅಗಲ: ಕಾಳಗಕ್ಕಿಳಿದ ಬೈಡನ್–ಪುಟಿನ್

ʼಯುಎಸ್ ಮಾಜಿ ಅಧ್ಯಕ್ಷ ಟ್ರಂಪ್ ಅಸಾಧಾರಣ ಮತ್ತುಪ್ರತಿಭಾವಂತ ವ್ಯಕ್ತಿಎಂದುನಾನುಈಗಲೂ ನಂಬುತ್ತೇನೆ. ಇಲ್ಲದಿದ್ದರೆ ಅವರು ಅಮೆರಿಕದ ಅಧ್ಯಕ್ಷರಾಗುತ್ತಿರಲಿಲ್ಲ. ಅವರದು ವರ್ಣರಂಜಿತ ವ್ಯಕ್ತಿತ್ವ. ನೀವು ಅವರನ್ನು ಇಷ್ಟಪಡಬಹುದು ಅಥವಾ ಇಷ್ಟಪಡದೆಯೂ ಇರಬಹುದು. ಈ ಹಿಂದೆ ಅವರೇನು ತುಂಬಾ ಕಾಲದಿಂದ ರಾಜಕೀಯದಲ್ಲಿ ಇದ್ದವರಲ್ಲ. ಕೆಲವರು ಅವರನ್ನು ಇಷ್ಟಪಡುತ್ತಾರೆ, ಇನ್ನೂ ಕೆಲವರು ಇಷ್ಟಪಡುವುದಿಲ್ಲ. ಆದರೆ ಅದೇ ವಾಸ್ತವʼ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇರಾನ್‌ಗೆ ಸುಧಾರಿತ ಉಪಗ್ರಹ ವ್ಯವಸ್ಥೆಯನ್ನು ಹಸ್ತಾಂತರಿಸಲು ರಷ್ಯಾ ಸಿದ್ಧತೆ ನಡೆಸುತ್ತಿದೆ ಎಂಬ ಅಮೆರಿಕ ಮಾಧ್ಯಮಗಳ ವರದಿಯನ್ನೂ ಪುಟಿನ್ ಇದೇ ವೇಳೆ ಅಲ್ಲಗಳೆದರು.

ಈ ಹಿಂದೆ, ‘ಎಬಿಸಿ ನ್ಯೂಸ್’ಗೆ ಸಂದರ್ಶನ ನೀಡಿದ್ದ ಜೋ ಬೈಡನ್,ಪುಟಿನ್ ಅವರನ್ನು ‘ಹಂತಕ’ ಎಂದು ಕರೆದಿದ್ದರು.ರಷ್ಯಾದ ವಿರೋಧ ಪಕ್ಷದ ನಾಯಕ ಅಲೆಕ್ಸಿ ನವಾಲ್ನಿ ಅವರು ನೋವಿಚೋಕ್ ಎಂಬ ವಿಷ ಪದಾರ್ಥ ಸೇವಿಸಿದ್ದ ಪ್ರಕರಣವನ್ನು ಉಲ್ಲೇಖಿಸಿ ಪುಟಿನ್ ವಿರುದ್ಧ ಕಿಡಿ ಕಾರಿದ್ದರು.

ಇದನ್ನೂ ಓದಿ:ರಷ್ಯಾ: ಸಾವಿನ ಅಂಚಿನಲ್ಲಿ ಪುಟಿನ್ ಕಡು ವಿರೋಧಿ ಅಲೆಕ್ಸಿ ನವಾಲ್ನಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.