ಬೀಜಿಂಗ್: ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾ ಮತ್ತು ಫಿಲಿಪ್ಪೀನ್ಸ್ ಎರಡೂ ದೇಶಗಳು ಹಕ್ಕು ಸಾಧಿಸಲು ಪ್ರಯತ್ನಿಸುತ್ತಿರುವ ವಿವಾದಿತ ದ್ವೀಪ ಸಮೂಹ ‘ಸ್ಕಾರ್ಬರೊ ಶೋಲ್‘ನಲ್ಲಿ, ಫಿಲಿಪ್ಪೀನ್ಸ್ನ ಹಡಗು, ಉದ್ದೇಶಪೂರ್ವಕವಾಗಿ ತನ್ನ ಹಡಗಿಗೆ ಡಿಕ್ಕಿ ಹೊಡೆದಿದೆ ಎಂದು ಚೀನಾದ ಕರಾವಳಿ ಕಾವಲು ಪಡೆ ಆರೋಪಿಸಿದೆ.

‘ಫಿಲಿಪ್ಪೀನ್ಸ್ಗೆ ಸೇರಿದ 10ಕ್ಕೂ ಹೆಚ್ಚು ಹಡಗುಗಳು ಏಕಕಾಲದಲ್ಲಿ ವಿವಿಧ ದಿಕ್ಕುಗಳಿಂದ ‘ಹುವಾಂಗ್ಯಾನ್ ದ್ವೀಪ’ದತ್ತ (ಸ್ಕಾರ್ಬರೊ ಶೋಲ್) ನುಗ್ಗಿಬಂದವು. ಈ ಹಡಗುಗಳ ಮೇಲೆ ಜಲಫಿರಂಗಿ ಬಳಸಲಾಯಿತು’ ಎಂದು ಚೀನಾದ ಕರಾವಳಿ ಕಾವಲು ಪಡೆಯ(ಸಿಸಿಜಿ) ವಕ್ತಾರ ಗಾನ್ ಯೂ ಹೇಳಿದ್ದಾರೆ.

‘ಸ್ಕಾರ್ಬರೊ ಶೋಲ್’ನ ಒಂದು ಭಾಗವನ್ನು ‘ರಾಷ್ಟ್ರೀಯ ಪ್ರಕೃತಿ ಮೀಸಲು ಪ್ರದೇಶ’ ಎಂದು ಚೀನಾ ಘೋಷಿಸಿ 6 ದಿನಗಳು ಕಳೆದಿದ್ದು, ಇದರ ಬೆನ್ನಲ್ಲೇ ಫಿಲಿಪ್ಪೀನ್ಸ್ನಿಂದ ಈ ವಿರೋಧ ವ್ಯಕ್ತವಾಗಿದೆ. ಆದರೆ, ಹಡಗು ಡಿಕ್ಕಿ ಘಟನೆಗೆ ಸಂಬಂಧಿಸಿದಂತೆ ಫಿಲಿಪ್ಪೀನ್ಸ್ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.

ಸ್ಕಾರ್ಬರೊ ಶೋಲ್ನ ಒಂದು ಭಾಗವನ್ನು ಚೀನಾ ‘ಪ್ರಕೃತಿ ಮೀಸಲು ಪ್ರದೇಶ’ವಾಗಿ ಘೋಷಿಸುವುದರ ವಿರುದ್ಧ ರಾಜತಾಂತ್ರಿಕ ಪ್ರತಿಭಟನೆ ನಡೆಸುವುದಾಗಿ ಫಿಲಿಪ್ಪೀನ್ಸ್ ವಾರದ ಹಿಂದೆ ಹೇಳಿತ್ತು.

ಎರಡು ದೇಶಗಳ ನಡುವಿನ ಜಲ ಗಡಿ ಮತ್ತು ಪ್ರಮುಖ ಮೀನುಗಾರಿಕಾ ತಾಣವೂ ಆಗಿರುವ ಈ ದ್ವೀಪದ ಮೇಲೆ ಹಕ್ಕು ಸಾಧಿಸಲು ಚೀನಾ–ಫಿಲಿಪ್ಪೀನ್ಸ್ ನಡುವೆ ನಿರಂತರವಾಗಿ ಸಂಘರ್ಷ ಮುಂದುವರಿದಿದೆ. ಫಿಲಿಪ್ಪೀನ್ಸ್, ವಿಯಟ್ನಾಂ, ಮಲೇಷ್ಯಾ, ಬ್ರೂನೈ ಮತ್ತು ತೈವಾನ್ ದೇಶಗಳು ಚೀನಾದ ಈ ಪ್ರಯತ್ನವನ್ನುವಿರೋಧಿಸುತ್ತಿವೆ.

ವಿಮಾನವಾಹಕ ನೌಕೆ ನಿಯೋಜನೆ:

ದಕ್ಷಿಣ ಚೀನಾ ಸಮುದ್ರದಲ್ಲಿ ಉದ್ವಿಗ್ನತೆ ಮುಂದುವರಿದ ಬೆನ್ನಲ್ಲೇ, ಚೀನಾವು ತನ್ನ ಹೊಸ ವಿಮಾನವಾಹಕ ನೌಕೆಯನ್ನು ಕರಾವಳಿ ತೀರದಲ್ಲಿ ಸನ್ನದ್ಧವಾಗಿರಿಸಿದೆ.

‘ಫ್ಯುಜಿಯಾನ್’ ಚೀನಾ ನೌಕಾಪಡೆಯ ಮೂರನೆಯ ವಿಮಾನವಾಹಕ ನೌಕೆಯಾಗಿದೆ. ಈ ನೌಕೆ ಇನ್ನೂ ಅಧಿಕೃತವಾಗಿ ಕಾರ್ಯಾಚರಣೆ ಆರಂಭಿಸಿಲ್ಲ. ಪರೀಕ್ಷಾರ್ಥ ಮತ್ತು ತರಬೇತಿ ಉದ್ದೇಶಕ್ಕಾಗಿ ದಕ್ಷಿಣ ಚೀನಾ ಸಮುದ್ರದಲ್ಲಿ ಕಾರ್ಯಾಚರಿಸುತ್ತಿತ್ತು. ಫ್ಯುಜಿಯಾನ್ ನಿಯೋಜನೆ ಬೆನ್ನಲ್ಲೇ, ಮೂರು ಅತ್ಯಾಧುನಿಕ ವಿಮಾನವಾಹಕಗಳು ಚೀನಾದ ಕರಾವಳಿ ಪಡೆಗೆ ಸೇರ್ಪಡೆಯಾದಂತಾಗಿವೆ.

ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಹಕ್ಕು ಸ್ಥಾಪಿಸಲು ಚೀನಾ ಅನುಸರಿಸಿರುವ ಮತ್ತೊಂದು ಬಲವಂತದ ಕ್ರಮ ಇದು
ಮಾರ್ಕೊ ರುಬಿಯೊ ಅಮೆರಿಕ ವಿದೇಶಾಂಗ ಕಾರ್ಯದರ್ಶಿ

ಗ್ರೇಟ್ ಬ್ರಿಟನ್ ಆಸ್ಟ್ರೇಲಿಯಾ ಕಳವಳ

ಚೀನಾ– ಫಿಲಿಪ್ಪೀನ್ಸ್ ಹಡಗು ಡಿಕ್ಕಿ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ದಕ್ಷಿಣ ಚೀನಾ ಸಮುದ್ರದಲ್ಲಿನ ಉದ್ವಿಗ್ನತೆ ಕುರಿತು ನಡೆಯುತ್ತಿರುವ ಚರ್ಚೆ ಕುರಿತು ಗ್ರೇಟ್ ಬ್ರಿಟನ್ ಮತ್ತು ಆಸ್ಟ್ರೇಲಿಯಾ ಕಳವಳ ವ್ಯಕ್ತಪಡಿಸಿವೆ. ‘ಪ್ರಕೃತಿ ಸಂರಕ್ಷಣೆ ಹೆಸರಿನಲ್ಲಿ ಚೀನಾವು ‘ಸ್ಕಾರ್ಬರೊ ಶೋಲ್‘ ಮೇಲೆ ಹಕ್ಕು ಸ್ಥಾಪಿಸಲು ನಡೆಸುತ್ತಿರುವ ಪ್ರಯತ್ನವನ್ನು ನಾವು ವಿರೋಧಿಸುತ್ತೇವೆ’ ಎಂದು ಫಿಲಿಪ್ಪೀನ್ಸ್ನಲ್ಲಿರುವ ಕೆನಡಾದ ರಾಯಭಾರ ಕಚೇರಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.