ಸೋಲ್: ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರ ವಿರುದ್ಧ ದಂಗೆ ಎಬ್ಬಿಸಿದ ಮತ್ತು ಅಧಿಕಾರ ದುರುಪಯೋಗ ಪ್ರಕರಣದಡಿ ಕ್ರಮ ಕೈಗೊಳ್ಳುವಂತೆ ತನಿಖಾಧಿಕಾರಿಗಳು ಗುರುವಾರ ಶಿಫಾರಸು ಮಾಡಿದ್ದಾರೆ.

ನಾಗರಿಕ ಕಾನೂನನ್ನು ರದ್ದುಗೊಳಿಸಿ, ಮಿಲಿಟರಿ ಆಡಳಿತವನ್ನು ಜಾರಿಗೊಳಿಸಲು ಯೂನ್ ಅವರು ಡಿ.3ರಂದು ಯತ್ನಿಸಿದ್ದ ಬಗ್ಗೆ ತನಿಖೆ ನಡೆಸುತ್ತಿದ್ದ ತನಿಖಾ ಸಂಸ್ಥೆ ತನ್ನ ವರದಿಯನ್ನು ಪ್ರಾಸಿಕ್ಯೂಟರ್ಗೆ ಸಲ್ಲಿಸಿದೆ.

ಮಾಜಿ ರಕ್ಷಣಾ ಸಚಿವ ಮತ್ತು ಇತರ ಸೇನಾ ಕಮಾಂಡರ್ಗಳೊಂದಿಗೆ ಸೇರಿ ಸಾಂವಿಧಾನಿಕ ವ್ಯವಸ್ಥೆಗೆ ಹಾನಿ ಉಂಟುಮಾಡಿರುವ ಯೂನ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ತನಿಖಾಧಿಕಾರಿ ಹೇಳಿದ್ದಾರೆ.

ಯೂನ್ ವಿರುದ್ಧ ವಿಚಾರಣೆ ನಡೆಸಬೇಕೇ ಎಂಬ ಬಗ್ಗೆ ನಿರ್ಧಾರ ಕೈಗೊಳ್ಳಲು ಪ್ರಾಸಿಕ್ಯೂಷನ್ಗೆ ತನಿಖಾ ವರದಿ ಸಲ್ಲಿಕೆಯಾದ ಬಳಿಕ 11 ದಿನ ಕಾಲಾವಕಾಶ ಇರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.