ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಶ್ರೀಲಂಕಾದಲ್ಲಿ ಸರಣಿ ಬಾಂಬ್ ಸ್ಫೋಟ: 160 ಸಾವು, 35 ಮಂದಿ ಹೊರ ರಾಷ್ಟ್ರದವರು

Last Updated 21 ಏಪ್ರಿಲ್ 2019, 10:49 IST
ಅಕ್ಷರ ಗಾತ್ರ

ಕೊಲಂಬೊ: ಭಾನುವಾರ ಬೆಳಗ್ಗೆ ಶ್ರೀಲಂಕಾದಲ್ಲಿ 6 ಸರಣಿ ಬಾಂಬ್ ಸ್ಫೋಟ ನಡೆದಿದೆ.ಇಲ್ಲಿನ ಮೂರು ಚರ್ಚ್ ಮತ್ತು ಎರಡು ಐಷಾರಾಮಿ ಹೋಟೆಲ್‌ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಬಾಂಬ್ ಸ್ಫೋಟ ಸಂಭವಿಸಿದ್ದು 160 ಮಂದಿ ಸಾವಿಗೀಡಾಗಿದ್ದಾರೆ. ಇದರಲ್ಲಿ 35 ಮಂದಿ ಹೊರ ರಾಷ್ಟ್ರದವರಾಗಿದ್ದಾರೆ,

ಈಸ್ಟರ್ ಹಬ್ಬದಾಚರಣೆ ವೇಳೆ ಸಂಭವಿಸಿದಸರಣಿ ಬಾಂಬ್ ಸ್ಫೋಟದಲ್ಲಿ 160 ಮಂದಿ ಸಾವಿಗೀಡಾಗಿದ್ದು, 400 ಮಂದಿಗೆ ಗಾಯಗಳಾಗಿವೆ ಎಂದು ಶ್ರೀಲಂಕಾದ ಮಾಧ್ಯಮಗಳು ವರದಿ ಮಾಡಿದೆ.

ಶ್ರೀಲಂಕಾದಪರಿಸ್ಥಿತಿ ಬಗ್ಗೆ ಭಾರತ ಸರ್ಕಾರ ಮತ್ತು ರಾಯಭಾರಿ ಕಚೇರಿ ಪರಿವೀಕ್ಷಿಸುತ್ತಿದೆ ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟಿಸಿದ್ದಾರೆ.

ಶ್ರೀಲಂಕಾದ ಪ್ರಧಾನಿ ರಾನಿಲ್ ವಿಕ್ರೆಮೆಸಿಂಘೆ ತುರ್ತು ಸಭೆ ಕರೆಯಲಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

ಚರ್ಚ್‌ನಲ್ಲಿ ಈಸ್ಟರ್ ಹಬ್ಬದ ಪ್ರಯುಕ್ತ ವಿಶೇಷ ಪ್ರಾರ್ಥನೆ ನಡೆಯುತ್ತಿದ್ದ ವೇಳೆ ಸ್ಥಳೀಯ ಕಾಲಮಾನ ಬೆಳಗ್ಗೆ 8.45ಕ್ಕೆ ಬಾಂಬ್ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ವಕ್ತಾರ ರುವಾನ್ ಗುಣಶೇಖರ ಹೇಳಿದ್ದಾರೆ.

ಕೊಲಂಬೊದಲ್ಲಿರುವ ಸೇಂಟ್ ಆ್ಯಂಟನಿ ಚರ್ಚ್, ಪಶ್ಚಿಮ ಕರಾವಳಿಯ ನೆಗೆಂಬೊದಲ್ಲಿರುವ ಸೇಂಟ್ ಸೆಬಾಸ್ಟಿಯನ್ ಚರ್ಚ್ ಮತ್ತು ಪೂರ್ವ ಬಟ್ಟಿಕಲೊಲಾದಲ್ಲಿರುವ ಚರ್ಚ್ ಮೇಲೆ ಬಾಂಬ್ ದಾಳಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.

ಇಲ್ಲಿನ ಐಷಾರಾಮಿ ಹೋಟೆಲ್‌ಗಳಾದ ಶಾಂಗ್ರಿಲಾ, ದಿ ಸಿನೆಮನ್ ಗ್ರ್ಯಾಂಡ್ ಮತ್ತು ಕಿಂಗ್ಸ್‌ಬರಿಯಲ್ಲಿ ಮೂರು ಸ್ಫೋಟ ನಡೆದಿದೆ.

ಶ್ರೀಲಂಕಾದಲ್ಲಿರುವ ಕ್ರೈಸ್ತ ಸಮುದಾಯದವರನ್ನು ಗುರಿಯಾಗಿರಿಸಿ ಈಸ್ಟರ್ ದಿನದಂದೇ ದಾಳಿ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ. ಹಲವಾರು ವರ್ಷಗಳ ನಂತರ ಶ್ರೀಲಂಕಾದಲ್ಲಿ ನಡೆದ ಅತಿ ಭೀಕರ ಬಾಂಬ್ ದಾಳಿ ಇದಾಗಿದೆ.ಆದಾಗ್ಯೂ, ಬಾಂಬ್ ದಾಳಿಯ ಹೊಣೆಯನ್ನು ಯಾವುದೇ ವ್ಯಕ್ತಿ ಅಥವಾಸಂಘಟನೆ ವಹಿಸಿಲ್ಲ.

ಶ್ರೀಲಂಕಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಭಾರತೀಯ ಪ್ರಜೆಗಳ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ ಟ್ವೀಟ್ ಮಾಡಿದೆ. ಸಹಾಯವಾಣಿ ಸಂಖ್ಯೆ:
+94777903082 +94112422788 +94112422789

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT