ನ್ಯೂಯಾರ್ಕ್/ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ತಾನದ ನಡುವೆ ಇತ್ತೀಚೆಗೆ ನಡೆದಿದ್ದ ಸೇನಾ ಸಂಘರ್ಷವನ್ನು ನಾನೇ ನಿಲ್ಲಿಸಿದ್ದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಪುರುಚ್ಚರಿಸಿದ್ದಾರೆ. ಅಲ್ಲದೇ ಈವರೆಗೆ ಏಳು ಯುದ್ಧಗಳನ್ನು ಕೊನೆಗೊಳಿಸಿದ್ದಕ್ಕಾಗಿ ತನಗೆ 'ನೊಬೆಲ್ ಶಾಂತಿ ಪ್ರಶಸ್ತಿ' ಸಿಗಬೇಕು ಎಂದು ಪ್ರತಿಪಾದಿಸಿದ್ದಾರೆ.

ಜೂನ್ 10ರಂದು ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿವೆ ಎಂದು ಟ್ರಂಪ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಘೋಷಣೆ ಮಾಡಿದ್ದರು. ಅದಕ್ಕೂ ಮುನ್ನ ಇಡೀ ರಾತ್ರಿ ವಾಷಿಂಗ್ಟನ್ ಮಧ್ಯಸ್ಥಿಕೆಯಲ್ಲಿ ಪೂರ್ಣ ಪ್ರಮಾಣದ ಹಾಗೂ ತಕ್ಷಣದ ಕದನ ವಿರಾಮಕ್ಕೆ ಒಪ್ಪಿಸಲಾಯಿತು ಎಂದಿದ್ದರು.

ಈವರೆಗೆ ಸುಮಾರು 40ಕ್ಕೂ ಹೆಚ್ಚು ಬಾರಿ ತಮ್ಮ ಹೇಳಿಕೆಯನ್ನು ಪುನರುಚ್ಚರಿಸಿದ್ದಾರೆ. ಆದರೆ ಮೂರನೇ ರಾಷ್ಟ್ರದ ಮಧ್ಯಪ್ರವೇಶವನ್ನು ಭಾರತ ನಿರಾಕರಿಸುತ್ತಲೇ ಬಂದಿದೆ.
.ಬ್ರಿಟನ್ ಪ್ರಧಾನಿ ಎದುರಲ್ಲೇ ಭಾರತ-ಪಾಕ್ ಯುದ್ಧ ನಿಲ್ಲಿಸಿರುವುದಾಗಿ ಹೇಳಿದ ಟ್ರಂಪ್.
ಶನಿವಾರ ಅಮೆರಿಕನ್ ಕಾರ್ನರ್ಸ್ಟೋನ್ ಇನ್ಸ್ಟಿಟ್ಯೂಟ್ ಸ್ಥಾಪಕರ ಭೋಜನಕೂಟದಲ್ಲಿ ಮಾತನಾಡಿದ ಟ್ರಂಪ್, 'ವಿಶ್ವ ಮಟ್ಟದಲ್ಲಿ ಈ ಹಿಂದೆ ಯಾರೂ ಮಾಡದ, ಗೌರವಿಸುವ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ನಾವು ಶಾಂತಿ ಒಪ್ಪಂದಗಳನ್ನು ರೂಪಿಸುತ್ತಿದ್ದೇವೆ. ಯುದ್ಧಗಳನ್ನು ನಿಲ್ಲಿಸುತ್ತಿದ್ದೇವೆ' ಎಂದಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ಬಗ್ಗೆ ಯೋಚಿಸಿ. ಯುದ್ಧವನ್ನು ಹೇಗೆ ನಿಲ್ಲಿಸಿದೆ ಎಂದು ನಿಮಗೆ ತಿಳಿದಿದೆ. ಭಾರತ–ಪಾಕ್ ನಡುವಿನ ಸೇನಾ ಸಂಘರ್ಷವನ್ನು ನಿಲ್ಲಿಸದಿದ್ದರೆ ಅದು ಬಹುಶಃ ಪರಮಾಣು ಯುದ್ಧದಲ್ಲಿ ಅಂತ್ಯವಾಗುತ್ತಿತ್ತು. ‘ಅವರು ಒಂದರ ಹಿಂದೆ ಒಂದರಂತೆ ಐದು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದರು. ಈ ವೇಳೆ ಅವರೊಂದಿಗೆ ನಾನು ದೂರವಾಣಿ ಮೂಲಕ ಮಾತನಾಡಿದೆ. ಇದನ್ನು ಹೀಗೆಯೇ ಮುಂದುವರಿಸಿದರೆ ನಿಮ್ಮೊಂದಿಗೆ ಯಾವುದೇ ವ್ಯಾಪಾರ ನಡೆಸುವುದಿಲ್ಲ. ಅದು ನಿಮಗೆ ಮಾರಕವಾಗುತ್ತದೆ ಎಂಬುದಾಗಿ ಎಚ್ಚರಿಸಿದ್ದೆ ಎಂದು ಟ್ರಂಪ್ ಹೇಳಿದ್ದಾರೆ

7 ಯುದ್ಧಗಳನ್ನು ನಿಲ್ಲಿಸಿದ್ದೇನೆ:

ಭಾರತ– ಪಾಕಿಸ್ತಾನ, ಥೈಲ್ಯಾಂಡ್–ಕಾಂಬೋಡಿಯಾ, ಅರ್ಮೇನಿಯಾ–ಅಜರ್ಬೈಜಾನ್, ಕೊಸೊವೊ–ಸರ್ಬಿಯಾ, ಇಸ್ರೇಲ್–ಇರಾನ್, ಈಜಿಪ್ಟ್–ಇಥಿಯೋಪಿಯಾ, ಕಾಂಗೊ ಗಣರಾಜ್ಯ– ರುವಾಂಡಾ ಸೇರಿ ಒಟ್ಟು 7 ಯುದ್ಧಗಳನ್ನು ನಿಲ್ಲಿಸಿದ್ದೇವೆ. ಅವುಗಳಲ್ಲಿ ಶೇ 60ರಷ್ಟು ವ್ಯಾಪಾರದ ಕಾರಣವೊಡ್ಡಿ ನಿಲ್ಲಿಸಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
.ಭಾರತ–ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನೊಬೆಲ್ ಪ್ರಶಸ್ತಿ ಸಿಗುವುದಿಲ್ಲ: ಟ್ರಂಪ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.