ತೈಪೆ: ಚೀನಾದ ಯುದ್ಧನೌಕೆಗಳು ಹಾಗೂ ಯುದ್ಧವಿಮಾನಗಳು ತೈವಾನ್ ಸುತ್ತ ಕಂಡುಬಂದಿವೆ. ಆದರೆ, ಇದು ಚೀನಾ ಸೇನೆಯು ಕವಾಯತು ನಡೆಸಿದೆಯೇ ಎಂಬುದರ ಕುರಿತು ಸ್ಪಷ್ಟವಾಗಿಲ್ಲ.

‘ಚೀನಾ ನೌಕಾಪಡೆಯ 12ಕ್ಕೂ ಅಧಿಕ ಯುದ್ಧಹಡಗುಗಳು, 47 ಯುದ್ಧವಿಮಾನಗಳು ಕಂಡುಬಂದಿದ್ದು, ಈ ಹಿಂದೆ ನಡೆದ ಸೇನಾ ಕವಾಯತಿನಲ್ಲಿ ನಡೆದಂತೆ ಯಾವುದೇ ಚಟುವಟಿಕೆಗಳು ಕಂಡುಬಂದಿಲ್ಲ’ ಎಂದು ತೈವಾನ್ ರಕ್ಷಣಾ ಇಲಾಖೆಯು ತಿಳಿಸಿದೆ.

‘ತೈವಾನ್ ಮಾತ್ರವಲ್ಲದೇ, ಪೆಸಿಫಿಕ್ ಸಾಗರದಲ್ಲಿಯೂ ಹೆಚ್ಚುವರಿಯಾಗಿ ಹಡಗುಗಳನ್ನು ನಿಯೋಜಿಸಲಾಗಿತ್ತು’ ಎಂದು ಸುದ್ದಿಗೋಷ್ಠಿಯಲ್ಲಿ ರಕ್ಷಣಾ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ತೈವಾನ್ ತನ್ನ ದೇಶದ ಪ್ರದೇಶವೆಂದು ಚೀನಾ ಪ್ರತಿಪಾದಿಸುತ್ತಿದೆ. ಅದೇ ರೀತಿ, ಸ್ವಯಂ ಆಡಳಿತ ಹೊಂದಿರುವ ತೈವಾನ್, ಅಮೆರಿಕವೂ ಸೇರಿದಂತೆ ಬೇರೆ ದೇಶಗಳ ಜೊತೆಗೆ ಅಧಿಕೃತ ಮಾತುಕತೆ ನಡೆಸುವುದಕ್ಕೆ ಮೊದಲಿನಿಂದಲೂ ಚೀನಾ ವಿರೋಧ ವ್ಯಕ್ತಪಡಿಸುತ್ತಿದೆ. ಹೀಗಾಗಿ ಎರಡು ರಾಷ್ಟ್ರಗಳ ನಡುವೆ ಯುದ್ಧದ ಸನ್ನಿವೇಶ ಸೃಷ್ಟಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.