ಕೀವ್/ಬ್ರಸೆಲ್ಸ್: ಉಕ್ರೇನ್ ಬೆಂಬಲಕ್ಕೆ ಇನ್ನಷ್ಟು ಶಸ್ತ್ರಾಸ್ತ್ರದ ಬೆಂಬಲವನ್ನು ನ್ಯಾಟೊ ರಾಷ್ಟ್ರಗಳು ಘೋಷಿಸಿದ ಬೆನ್ನಲ್ಲೇ ಉಕ್ರೇನ್ ಮೇಲೆ ರಷ್ಯಾ ಗುರುವಾರ ಸೇನಾ ದಾಳಿ ತೀವ್ರಗೊಳಿಸಿದೆ. ಕಳೆದ 24 ತಾಸುಗಳಲ್ಲಿ ಉಕ್ರೇನಿನ40ಕ್ಕೂ ಹೆಚ್ಚು ನಗರಗಳು ಮತ್ತು ಪಟ್ಟಣಗಳ ಮೇಲೆರಷ್ಯಾ ಕ್ಷಿಪಣಿಗಳನ್ನು ಉಡಾಯಿಸಿದೆ.

ಮೈಕೊಲೈವ್ ಪಟ್ಟಣದ ಮೇಲೆ ಭಾರಿ ಬಾಂಬ್ ದಾಳಿ ನಡೆದಿದೆ. ರಾಜಧಾನಿ ಕೀವ್ ನಗರದ ಸಮೀಪ ಇರಾನಿ ಡ್ರೋನ್ಗಳು ಅಪ್ಪಳಿಸಿವೆ. ನಾಗರಿಕರ ಮೂಲಸೌಕರ್ಯಗಳು, ಜನವಸತಿ ಮತ್ತು ಬಹುಮಹಡಿ ಕಟ್ಟಡಗಳು ಹಾನಿಗೀಡಾಗಿವೆ.

ರಷ್ಯಾದ 25 ಮಿಲಿಟರಿ ಗುರಿಗಳ ಮೇಲೆಉಕ್ರೇನ್ವಾಯು ಪಡೆಯು 32 ದಾಳಿಗಳನ್ನು ನಡೆಸಿರುವುದಾಗಿ ಉಕ್ರೇನ್ನ ಶಸ್ತ್ರ ಪಡೆಗಳ ಮುಖ್ಯಸ್ಥರು ಹೇಳಿದ್ದಾರೆ. ಇದೇ ವೇಳೆ ಬ್ರಸೆಲ್ಸ್ನಲ್ಲಿ ನ್ಯಾಟೊ ಮಿತ್ರರಾಷ್ಟ್ರಗಳ ಸಭೆಯಲ್ಲಿ, ಯುರೋಪಿನ ವಾಯು ರಕ್ಷಣೆ ಹೆಚ್ಚಿಸುವ ಜಂಟಿ ಯೋಜನೆಗಳನ್ನು ಪ್ರಕಟಿಸಲಾಯಿತು. ಇದೇ ವೇಳೆ ಅಮೆರಿಕ ಕೂಡ ನ್ಯಾಟೊ ತನ್ನ ಪ್ರತಿ ಇಂಚು ನೆಲವನ್ನು ರಕ್ಷಿಸಿಕೊಳ್ಳಲಿದೆ ಎಂದು ಗುಡುಗಿದೆ.

ಓದಿ...ಉಕ್ರೇನ್ ನ್ಯಾಟೊ ಸೇರಿದರೆ ಮೂರನೇ ಮಹಾಯುದ್ಧ ಖಚಿತ- ರಷ್ಯಾ

ಪ್ರಮುಖಾಂಶಗಳು

* ಉಕ್ರೇನ್ನಲ್ಲಿ ಆಕ್ರಮಣಕ್ಕೆ ಸೇನೆಯ ಭಾಗಶಃ ಸಜ್ಜುಗೊಳಿಸುವಿಕೆಗೆ ಪುಟಿನ್ ಆದೇಶಿಸಿದ ನಂತರ ಕಡ್ಡಾಯ ಸೈನ್ಯ ಸೇವೆಯಲ್ಲಿದ್ದ ರಷ್ಯಾದ ಐವರು ಯೋಧರು ಮೃತಪಟ್ಟಿದ್ದಾರೆ. ಇವರು ಮೃತಪಟ್ಟ ಸ್ಥಳ ಬಹಿರಂಗಪಡಿಸಿಲ್ಲ. ಇವರೆಲ್ಲರೂ ಪಶ್ಚಿಮ ಸೈಬಿರಿಯಾದ ಕೈಗಾರಿಕಾ ಚೆಲಿಯಾಬಿನ್ಸ್ಕ್ ಪ್ರದೇಶದ ಬಡವರು ಎಂದು ರಷ್ಯಾದ ಸುದ್ದಿಸಂಸ್ಥೆ ವರದಿ ಮಾಡಿದೆ

* ರಷ್ಯಾದ ಕ್ಷಿಪಣಿ ದಾಳಿಗೆ ತುತ್ತಾಗಿರುವ ಉಕ್ರೇನ್ಗೆ ಮಾಸಿಕವಾಗಿ ಅಗತ್ಯವಿರುವ ಶತಕೋಟಿ ಡಾಲರ್ಗಳ ಸ್ಥಿರವಾದ ಆರ್ಥಿಕ ನೆರವುನೀಡಲು ಜಿ 7 ರಾಷ್ಟ್ರಗಳು ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಪ್ರತಿಜ್ಞೆ ಮಾಡಿವೆ

* ಕ್ಯಾಪ್ನಂತಹ ನಿರ್ಬಂಧಗಳನ್ನು ಹೇರುವ ದೇಶಗಳಿಗೆ ತೈಲ ಸರಬರಾಜು ಸ್ಥಗಿತಗೊಳಿಸುವುದಾಗಿ ರಷ್ಯಾ ಅಧ್ಯಕ್ಷ ಪುಟಿನ್ ಎಚ್ಚರಿಕೆ ನೀಡಿದ್ದಾರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.