ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಟ್ರಂಪ್‌ ಬಂಧನ ಸನ್ನಿಹಿತ?

Published 7 ಮೇ 2024, 16:09 IST
Last Updated 7 ಮೇ 2024, 16:09 IST
ಅಕ್ಷರ ಗಾತ್ರ

ನ್ಯೂಯಾರ್ಕ್ (ಎ.ಪಿ): 2016ರ ಅಧ್ಯಕ್ಷೀಯ ಚುನಾವಣೆ ವೇಳೆ ತಮ್ಮ ವಿರುದ್ಧ ಹೇಳಿಕೆ ನೀಡದಂತೆ ನೀಲಿಚಿತ್ರಗಳ ನಟಿಗೆ ಹಣ ನೀಡಿದ್ದ ಆರೋಪ ಕುರಿತ ‘ಹಷ್‌ ಮನಿ’ ಪ್ರಕರಣದ ವಿಚಾರಣೆ ಕೊನೆಯ ಹಂತಕ್ಕೆ ಬಂದಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರಿಗೆ ಜೈಲುಶಿಕ್ಷೆಗೆ ಗುರಿಯಾಗುವ ಆತಂಕ ಎದುರಾಗಿದೆ.

ನಟಿ ಸ್ಟಾರ್ಮಿ ಡೇನಿಯಲ್ಸ್‌ ಅವರು ‘ನಾನು ಟ್ರಂಪ್‌ ಲೈಂಗಿಕ ಸಂಬಂಧ ಹೊಂದಿದ್ದೆ’ ಎಂದು ಹೇಳಿದ್ದರು. 2016ರ ಚುನಾವಣೆ ವೇಳೆ ಈ ಬಗ್ಗೆ ಹೇಳಿಕೆ ನೀಡದೇ ಮೌನವಹಿಸಲು ನಟಿಗೆ ದೊಡ್ಡ ಮೊತ್ತ ನೀಡಲಾಗಿತ್ತು ಎಂಬ ಕುರಿತು ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆದಿದೆ.

ವಿಚಾರಣೆಯು ಈಗ ಕೊನೆಯ ಹಂತದಲ್ಲಿದ್ದು, ಈ ವಾರ ಪ್ರಮುಖ ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸುವ ಸಂಭವವಿದೆ.

ಟ್ರಂಪ್‌ ಜೊತೆಗಿನ ಸಂಬಂಧ ಕುರಿತು ಹೇಳಿಕೆ ನೀಡದಂತೆ ‘ಟ್ರಂಪ್‌ ಅವರ ಮಾಜಿ ವಕೀಲ ಮಿಚೆಲ್‌ ಕೊಹೇನ್ ಅವರು 2016ರ ಚುನಾವಣೆ ಪ್ರ‌ಚಾರದ ಸಂದರ್ಭದಲ್ಲಿ ನಟಿಗೆ ಹಣವನ್ನು ಪಾವತಿಸಿದ್ದರು’ ಎಂದು ಸರ್ಕಾರಿ ಪರ ವಕೀಲರು ಆರೋಪಿಸಿದ್ದರು. 

ಟ್ರಂಪ್ ಅವರ ಸಂಸ್ಥೆಯ ಮಾಜಿ ಮೇಲ್ವಿಚಾರಕ ಸೇರಿದಂತೆ ಇಬ್ಬರು ಸಾಕ್ಷ್ಯಗಳ ವಿಚಾರಣೆಯು ನಡೆಯಬೇಕಿದೆ. ಟ್ರಂಪ್‌ ಅವರ ಸಂಸ್ಥೆಯು ನಟಿಗೆ ಹಣವನ್ನು ಪಾವತಿಸಿದ್ದ ಸ್ವರೂಪದ ಕುರಿತಂತೆ ಈ ಸಾಕ್ಷ್ಯಗಳಿಂದ ಮಾಹಿತಿಯನ್ನು ಪಡೆಯಬೇಕಾಗಿದೆ. ಸಂಸ್ಥೆಯ ಮಾಜಿ ಮೇಲ್ವಿಚಾರಕ ಜಾಫ್ರಿ ಮ್ಯಾಕೊನಿ ಅವರ ಹೇಳಿಕೆಯು ಈ ಆರೋಪವನ್ನು ದೃಢಪಡಿಸಿಕೊಳ್ಳುವಲ್ಲಿ ಮಹತ್ವದ್ದಾಗಿದೆ ಎನ್ನಲಾಗಿದೆ.

2016ರಲ್ಲಿ ಟ್ರಂಪ್ ಅವರ ಸಂಸ್ಥೆಯ ಮಾಜಿ ಉಪಾಧ್ಯಕ್ಷ ಮಿಚೆಲ್‌ ಕೊಹೇನ್ ಅವರು ನಟಿಗೆ 1.3 ಲಕ್ಷ ಡಾಲರ್‌ ಪಾವತಿಸಿದ್ದು ಹೇಗೆ ಮತ್ತು ಇದನ್ನು ಯಾವ ರೀತಿ ವಾಪಸು ಸ್ವೀಕರಿಸಿದ್ದು ಎಂಬ ಅಂಶವನ್ನು ಕುರಿತಂತೆಯೇ ಈಗಿನ ವಿಚಾರಣೆಯು ಒತ್ತು ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT