ವಾಷಿಂಗ್ಟನ್: ಶನಿವಾರದೊಳಗೆ ಗಾಜಾದಲ್ಲಿ ಹಿಡಿದಿಟ್ಟಿರುವ ಎಲ್ಲ ಒತ್ತೆಯಾಳುಗಳನ್ನು ಹಮಾಸ್ ಬಿಡುಗಡೆ ಮಾಡದಿದ್ದಲ್ಲಿ ಇಸ್ರೇಲ್-ಹಮಾಸ್ ಕದನ ವಿರಾಮ ಒಪ್ಪಂದವನ್ನು ರದ್ದುಗೊಳಿಸಬೇಕು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಆದಾಗ್ಯೂ, ಈ ಕುರಿತು ಅಂತಿಮ ನಿರ್ಧಾರ ಇಸ್ರೇಲ್ಗೆ ಬಿಟ್ಟಿದ್ದು ಎಂದು ಅವರು ಹೇಳಿದ್ದಾರೆ.

ಸುಮಾರು ಒಂದೂವರೆ ವರ್ಷಗಳ ನಿರಂತರ ಯುದ್ಧದ ಬಳಿಕ ಇಸ್ರೇಲ್ ಹಾಗೂ ಹಮಾಸ್ ಮಧ್ಯೆ ಕದನ ವಿರಾಮ ಒಪ್ಪಂದ ಏರ್ಪಟ್ಟಿತ್ತು.

ಮೂರು ವಾರಗಳ ಹಿಂದಿನ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂದು ಆರೋಪಿಸಿರುವ ಹಮಾಸ್, ಗಾಜಾ ಪಟ್ಟಿಯಲ್ಲಿ ಒತ್ತೆಯಾಳುಗಳ ಬಿಡುಗಡೆ ವಿಳಂಬಗೊಳಿಸುವುದಾಗಿ ಹೇಳಿತ್ತು.

ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಟ್ರಂಪ್, 'ಎಲ್ಲ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಇಸ್ರೇಲ್ ಒತ್ತಾಯಿಸುವ ಸಮಯ ಬಂದಿದೆ. ಇಲ್ಲದಿದ್ದರೆ ಯುದ್ಧ ಪುನರಾರಂಭಿಸಬೇಕು' ಎಂದು ಹೇಳಿದ್ದಾರೆ.

'ಅಂತಿಮ ನಿರ್ಧಾರ ಇಸ್ರೇಲ್ಗೆ ಬಿಟ್ಟಿದ್ದು, ನಾನು ನನ್ನ ನಿರ್ಧಾರವನ್ನು ಹೇಳಿದ್ದೇನೆ. ಆದರೆ ನನ್ನ ಹೇಳಿಕೆಯು ಹಮಾಸ್ಗೆ ಅರ್ಥವಾಗುತ್ತದೆ' ಎಂದು ಹೇಳಿದ್ದಾರೆ.
.ಉಕ್ರೇನ್ ಸಮರ ಕೊನೆಗೊಳಿಸಲು ಪುಟಿನ್ ಜೊತೆ ಚರ್ಚೆ: ಟ್ರಂಪ್.ಫೆ.12ರಿಂದ ಪ್ರಧಾನಿ ಮೋದಿ ಎರಡು ದಿನಗಳ ಅಮೆರಿಕ ಪ್ರವಾಸ, ಟ್ರಂಪ್ ಜೊತೆ ಮಾತುಕತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.