ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬ್ರಿಟನ್ ಚುನಾವಣೆ: ದಾಖಲೆ ಪ್ರಮಾಣದಲ್ಲಿ ಭಾರತ ಸಂಜಾತ ಸಂಸದರು ಆಯ್ಕೆ

Published 5 ಜುಲೈ 2024, 11:30 IST
Last Updated 5 ಜುಲೈ 2024, 11:30 IST
ಅಕ್ಷರ ಗಾತ್ರ

ಲಂಡನ್‌: ಬ್ರಿಟನ್ ಸಂಸತ್‌ಗೆ ನಡೆದ ಚುನಾವಣೆಯ‌ಲ್ಲಿ ದಾಖಲೆಯ ‍ಪ್ರಮಾಣದಲ್ಲಿ ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಶುಕ್ರವಾರ ಫಲಿತಾಂಶ ಹೊರಬಿದ್ದಿದ್ದು ಸುಮಾರು 26 ಮಂದಿ ಭಾರತ ಮೂಲದವರು ಗೆಲುವು ಸಾಧಿಸಿದ್ದಾರೆ.

ನಿರ್ಗಮಿತ ಪ್ರಧಾನಿ ರಿಷಿ ಸುನಕ್ ಅವರು ಯಾಕ್‌ಶೈರ್ನ ರಿಚ್‌ಮಂಡ್‌ ಹಾಗೂ ನಾರ್ತಲೆಟ್ರೊನ್ ಕ್ಷೇತ್ರದಿಂದ ಗೆಲುವು ಸಾಧಿಸಿದ್ದಾರೆ.

ಗೃಹ ಇಲಾಖೆಯ ಮಾಜಿ ಕಾರ್ಯದರ್ಶಿಗಳಾದ ಸುಯೆಲ್ಲಾ ಬ್ರೇವ್‌ಮೆನ್ ಹಾಗೂ ಪ್ರೀತಿ ಪಟೇಲ್ ಅವರು ಜಯಶಾಲಿಗಳಾಗಿದ್ದಾರೆ. ಸುನಕ್ ಸಂಪುಟದದಲ್ಲಿ ಸಚಿವೆಯಾಗಿದ್ದ ಗೋವಾ ಮೂಲದ ಕ್ಲಾರಿ ಕುಟಿನ್ಹೊ, ಗಗನ್ ಮಹೀಂದ್ರಾ, ಶಿವಾನಿರಾಜ ಅವರು ಗೆದ್ದಿದ್ದಾರೆ.

ಲೇಬರ್ ಪಕ್ಷದಿಂದ ಅತಿ ಹೆಚ್ಚು ಭಾರತ ಮೂಲದ ಸಂಸದರು ಆಯ್ಕೆಯಾಗಿದ್ದಾರೆ. ಫೆಲ್ತಮ್ ಹಾಗೂ ಹೆಸ್ಟನ್‌ ಕ್ಷೇತ್ರದಿಂದ ಸೀಮಾ ಮಲ್ಹೋತ್ರಾ ಸುಲಭ ಗೆಲುವು ದಾಖಲಿಸಿದ್ದಾರೆ. ವಲ್‌ಸಲ್‌ ಹಾಗೂ ಬ್ಲಾಕ್ಸ್‌ವಿಚ್‌ನಿಂದ ವಲೇರಿ ವಾಜ್‌, ವಿಗನ್‌ನಲ್ಲಿ ಲಿಸಾ ನ್ಯಾಂಡಿಯವರು ಗೆದ್ದಿದ್ದಾರೆ.

ಬ್ರಿಟಿಷ್ ಸಿಖ್‌ ಸಂಸದರಾದ ಪ್ರೀತ್ ಕೌರ್‌ ಗಿಲ್‌, ತನ್‌ಮನ್‌ಜೀತ್‌ ಸಿಂಗ್ ದೇಶಿ ಅವರು ಕ್ರಮವಾಗಿ ಬರ್ಮಿಂಗ್‌ಹ್ಯಾಮ್ ಎಜ್‌ಬಾಸ್ಟನ್‌ ಹಾಗೂ ಸ್ಲೋ (Slough) ಕ್ಷೇತ್ರದಿಂದ ಜಯಶಾಲಿಯಾಗಿದ್ದಾರೆ.

ಜಸ್‌ ಅತ್ವಾಲ್ (ಇಲ್‌ಫಡ್ ಸೌತ್‌), ಬಗ್ಗಿ ಶಂಕರ್‌ (ಡೆರ್ಬಿ ಸೌತ್‌), ಸತ್ವೀರ್ ಕೌರ್‌ (ಸೌಥಾಂಪ್ಟನ್‌ ಟೆಸ್ಟ್), ಹರ್‌ಪ್ರೀತ್ ಉಪ್ಪಲ್ (ಹಡ್ಡಸ್‌ಫೀಲ್ಡ), ವರಿಂದರ್‌ ಜಸ್‌ (ವಲ್ವಹಾಮ್ಟನ್‌ ವೆಸ್ಟ್), ಗುರಿಂದರ್ ಜೋಸನ್ (ಸ್ಮೆತ್‌ವಿಕ್‌), ಕನಿಷ್ಕ ನಾರಾಯಣ್‌ (ಬೇಳಗ ಆಫ್ ಗ್ಲಮೋರ್ಗನ್, ಸೋನಿಯಾ ಕುಮಾರ್‌ (ಡಡ್ಲೆ), ಸುರೀನಾ ಬ್ರಕೆನ್‌ಬಿಜ್‌ ( ವಲ್ವಹಾಮ್ಟನ್‌ ನಾರ್ತ್‌ ಈಸ್ಟ್), ಕೀರ್ತಿ ಎಂಟ್ವಿಸಲ್‌ (ಬೋಲ್ಟನ್‌ ನಾರ್ತ್‌ ಈಸ್ಟ್‌), ಜೀವನ್ ಸಂದೆರ್‌ (ಲಾಪ್‌ಬರಹ್) ಹಾಗೂ ಸೋಜನ್ ಜೋಸೆಫ್‌ (ಆಶ್‌ಫರ್ಡ್‌) ಮುಂತಾದವರು ಲೇಬರ್ ಪಕ್ಷದಿಂದ ಇದೇ ಮೊದಲ ಬಾರಿಗೆ ಗೆಲುವು ಸಾಧಿಸಿದ್ದಾರೆ.

2019ರಲ್ಲಿ ಭಾರತ ಮೂಲದ 15 ಸಂಸದರು ಆಯ್ಕೆಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT