ಲಂಡನ್: ಬ್ರಿಟನ್ನ ಕನ್ಸರ್ವೇಟಿವ್ ಪಕ್ಷದ ಸಂಸದ ರಿಷಿ ಸುನಕ್ ಶುಕ್ರವಾರ ತಡರಾತ್ರಿ ಪಕ್ಷದ ನಾಯಕತ್ವಕ್ಕೆ ಸ್ಪರ್ಧಿಸಲು ಬೇಕಾದ ಕನಿಷ್ಠ ಮಿತಿಯನ್ನು ತಲುಪಿದ್ದಾರೆ.

‘#Ready4Rishi ಅವರನ್ನು ಬೆಂಬಲಿಸುವ 100ನೇ ಸಂಸದನ ಗೌರವ ಸಿಕ್ಕಿದೆ ಎಂದು ಹಿರಿಯ ಸಂಸದ ಟೋಬಿಯಾಸ್ ಎಲ್ವುಡ್ ಟ್ವೀಟ್ ಮಾಡಿದ್ದಾರೆ. ಸುನಕ್ ಅವರ ಇತರ ಬೆಂಬಲಿಗರು ಸಹ ಅವರು ಕನಿಷ್ಠ ಮಿತಿಯನ್ನು ದಾಟಿದ್ದಾರೆ ಎಂದು ಹೇಳಿದ್ದಾರೆ.

ರಿಷಿ ಸುನಕ್ ಅವರ ಪ್ರತಿಸ್ಪರ್ಧಿಗಳು ಪಕ್ಷದ 100 ಸಂಸದರಿಂದ ಬೆಂಬಲ ಪಡೆಯಲು ವಿಫಲವಾದರೆ ಸುನಕ್ ಸ್ವಯಂಚಾಲಿತವಾಗಿ ಪಕ್ಷದ ನಾಯಕ ಮತ್ತು ಪ್ರಧಾನ ಮಂತ್ರಿಯಾಗಿ ಆಯ್ಕೆಯಾಗುತ್ತಾರೆ.

ಪ್ರಧಾನ ಮಂತ್ರಿ ಲಿಜ್ ಟ್ರಸ್ ಅವರ ನಾಟಕೀಯ ರಾಜೀನಾಮೆಯ ನಂತರ, ಬ್ರಿಟನ್ ಆಡಳಿತ ಪಕ್ಷದಲ್ಲಿ ಈ ವರ್ಷ ಎರಡನೇ ಬಾರಿ ನಾಯಕತ್ವ ಸ್ಪರ್ಧೆ ಏರ್ಪಟ್ಟಿದೆ. ಕ್ಯಾಬಿನೆಟ್ ಸದಸ್ಯ ಪೆನ್ನಿ ಮೊರ್ಡಾಂಟ್ ಅವರು ತಮ್ಮ ಉಮೇದುವಾರಿಕೆಯನ್ನು ಔಪಚಾರಿಕವಾಗಿ ಘೋಷಿಸಿದ ಮೊದಲಿಗರಾಗಿದ್ದಾರೆ.

ಈ ಮಧ್ಯೆ, ಬೋರಿಸ್ ಜಾನ್ಸನ್ ಸಹ ಟೋರಿ ನಾಯಕತ್ವಕ್ಕೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಆದರೆ, ಸುನಕ್ ಅಥವಾ ಜಾನ್ಸನ್ ಅವರು ತಮ್ಮ ಸ್ಪರ್ಧೆ ಕುರಿತಂತೆ ಈವರೆಗೆ ಸಾರ್ವಜನಿಕವಾಗಿ ಘೋಷಿಸಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.