ಕೀವ್: ವಾಯು ದಾಳಿ ನಡೆಸುವುದಕ್ಕಾಗಿ ರಷ್ಯಾ ಸೇನೆ ಶನಿವಾರ ರಾತ್ರಿ ವೇಳೆ ಹಾರಿಸಿದ್ದ 80 ಡ್ರೋನ್‌ಗಳ ಪೈಕಿ 71ನ್ನು ಹೊಡೆದುರುಳಿಸಿದ್ದೇವೆ ಎಂದು ಉಕ್ರೇನ್ ವಾಯುಪಡೆ ಭಾನುವಾರ ತಿಳಿಸಿದೆ.
ಟೆಲಿಗ್ರಾಂ ಮೂಲಕ ಮಾಹಿತಿ ನೀಡಿರುವ ವಾಯುಪಡೆ, ಆರು ಡ್ರೋನ್‌ಗಳು ಪ್ರತಿದಾಳಿ ಬಳಿಕ ನಾಪತ್ತೆಯಾಗಿವೆ ಎಂದಿದೆ.
ರಷ್ಯಾ ಆಕ್ರಮಿತ ಉಕ್ರೇನ್ ಪ್ರದೇಶಗಳಾದ ಲುಹಾನ್‌ಸ್ಕ್ ಪ್ರಾಂತ್ಯದಿಂದ ಕ್ಷಿಪಣಿಗಳನ್ನು ಉಡಾಯಿಸಲಾಗಿತ್ತು ಎಂದಿರುವ ವಾಯುಪಡೆ, ಅವು ಏನಾದವು ಎಂಬ ಮಾಹಿತಿಯನ್ನು ನೀಡಿಲ್ಲ.
ರಷ್ಯಾ–ಉಕ್ರೇನ್ ಸಮರ 2022ರ ಫೆಬ್ರುವರಿಯಿಂದಲೂ ನಡೆಯುತ್ತಿದೆ.