ಕೀವ್: ಉಕ್ರೇನ್ ಪಡೆಗಳು ರಷ್ಯಾ ಮೇಲೆ ಪ್ರತಿದಾಳಿ ಆರಂಭಿಸಿದ್ದು, ಮಂಗಳವಾರ ಉಕ್ರೇನ್ನಿಂದ 1,300 ಕಿ.ಮೀ. ದೂರದಲ್ಲಿರುವ ರಷ್ಯಾದ ಕೈಗಾರಿಕಾ ಪ್ರದೇಶದ ಮೇಲೆ ಡ್ರೋನ್ ದಾಳಿ ನಡೆಸಿವೆ.

ಸ್ಥಳೀಯವಾಗಿ ಡ್ರೋನ್ ಮತ್ತು ರಕ್ಷಣಾ ಉಪಕರಣಗಳನ್ನು ತಯಾರಿಸುತ್ತಿದ್ದ ರಷ್ಯಾ ಘಟಕವನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ’ ಎಂದು ಉಕ್ರೇನ್ ಭದ್ರತಾ ಅಧಿಕಾರಿ ಆ್ಯಂಡ್ರಿ ಕೊವೆಲೆನ್ಕೊ ಸ್ಪಷ್ಟಪಡಿಸಿದ್ದಾರೆ.

ಉಕ್ರೇನ್ನ ಕೀವ್ ಪಟ್ಟಣದ ಮೇಲೆ ರಷ್ಯಾ ಭಾನುವಾರ ನಡೆಸಿದ ಡ್ರೋನ್ ದಾಳಿಯಲ್ಲಿ 10ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದರು. ರಷ್ಯಾದ ಈ ದಾಳಿಗೆ ಪ್ರತಿಯಾಗಿ ಉಕ್ರೇನ್ ದಾಳಿ ನಡೆಸಿದ್ದು, ಉಭಯ ದೇಶಗಳ ನಡುವಿನ ‘ಡ್ರೋನ್ ಸಮರ’ ತೀವ್ರಗೊಂಡಿದೆ.

ಉತ್ತರ ಕೊರಿಯಾ ಹಾಗೂ ಇರಾನ್ ಪೂರೈಸಿದ ಡ್ರೋನ್ಗಳಿಂದ ರಷ್ಯಾ ಭಾನುವಾರ ದಾಳಿ ನಡೆಸಿದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಆರೋಪಿಸಿದ್ದರು. ‘ಸುಧಾರಿತ ಡ್ರೋನ್, ಕ್ಷಿಪಣಿ ಉತ್ಪಾದನೆಯಿಂದ ಉಕ್ರೇನ್ ಹಿಂದೆ ಸರಿಯುವುದಿಲ್ಲ’ ಎಂಬ ಝೆಲೆನ್ಸ್ಕಿ ನಿಲುವನ್ನು ಸಮರ್ಥಿಸಿಕೊಳ್ಳುವಂತೆ ಮಂಗಳವಾರ ಉಕ್ರೇನ್ ಸ್ವದೇಶಿ ನಿರ್ಮಿತ ಡ್ರೋನ್ನಿಂದ ರಷ್ಯಾ ಮೇಲೆ ದಾಳಿ ನಡೆಸಿದೆ.

ಪೂರ್ವ ಮಾಸ್ಕೊದಿಂದ 620 ಮೈಲು ದೂರದಲ್ಲಿರುವ ‘ಇಜೆಸ್ಕ್’ ಕೈಗಾರಿಕಾ ಪ್ರದೇಶದ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ದಾಳಿಯಲ್ಲಿ ಅನೇಕರು ಗಾಯಗೊಂಡಿದ್ದು, ಕೈಗಾರಿಕಾ ಪ್ರದೇಶದಲ್ಲಿದ್ದ ಜನರನ್ನು ಬೇರೆಡೆಗೆ ಸ್ಥಳಾಂತರ ಮಾಡಲಾಗಿದೆ’ ಎಂದು ಇಜೆಸ್ಕ್ ಪ್ರದೇಶದ ಅಧಿಕಾರಿ ಅಲೆಕ್ಸಾಂಡರ್ ಬ್ರೆಕೊವ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.