ಕೀವ್: ರಷ್ಯಾದ ಪ್ರಮುಖ ಇಂಧನ ಸಂಗ್ರಹಾಗಾರದ ಮೇಲೆ ಉಕ್ರೇನ್ ಭಾನುವಾರ ಡ್ರೋನ್ಗಳ ದಾಳಿ ನಡೆಸಿದೆ. ಒಂದೇ ವಾರದಲ್ಲಿ ನಡೆದಿರುವ ಎರಡನೇ ದಾಳಿ ಇದು.

ದೇಶದ ಪ್ರಮುಖ ಇಂಧನ ಸಂಗ್ರಹಾಗಾರ ಮತ್ತು ಇಂಧನ ಸೌಲಭ್ಯಗಳ ಮೇಲೆ ಗಡಿಯಾಚೆಗಿನಿಂದ ಬೃಹತ್ ದಾಳಿಯಾಗಿದೆ ಎಂದು ರಷ್ಯಾದ ಪ್ರಾದೇಶಿಕ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇಲ್ಲಿಂದಲೇ ರಷ್ಯಾ ತನ್ನ ಸೇನೆಗೆ ಇಂಧನ ಪೂರೈಕೆ ಮಾಡುತ್ತಿತ್ತು ಎಂದು ಉಕ್ರೇನ್ ಹೇಳಿಕೊಂಡಿದೆ.

ಈಗಾಗಲೇ ಜರ್ಜರಿತಗೊಂಡಿರುವ ಉಕ್ರೇನ್ನ ವಿದ್ಯುತ್ ಗ್ರಿಡ್ನ ಮೇಲೆ ರಷ್ಯಾ ವ್ಯಾಪಕ ದಾಳಿ ಪ್ರಾರಂಭಿಸಿದ ಕೆಲ ದಿನಗಳ ನಂತರ ಉಕ್ರೇನ್ನಿಂದಲೂ ಪ್ರತಿದಾಳಿಯಾಗಿದೆ.

ರಷ್ಯಾದ ದಕ್ಷಿಣದ ಓರಿಯೊಲ್ ಪ್ರದೇಶದಲ್ಲಿನ ಸ್ಟಾಲ್ನಾಯ್ ಕಾನ್ ತೈಲ ಟರ್ಮಿನಲ್ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವು ತಾಸುಗಳ ನಂತರ ಬೆಂಕಿಯನ್ನು ನಂದಿಸಲಾಯಿತು. ಯಾವುದೇ ಸಾವುನೋವು ಸಂಭವಿಸಿಲ್ಲ. ಗಮನಾರ್ಹವಾದ ಹಾನಿಯೂ ಆಗಿಲ್ಲ ಎಂದು ಸ್ಥಳೀಯ ಗವರ್ನರ್ ಆಂಡ್ರೆ ಕ್ಲಿಚ್ಕೊವ್ ‘ಟೆಲಿಗ್ರಾಮ್ ಮೆಸೇಜಿಂಗ್ ಆ್ಯಪ್’ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇಂಧನ ಮತ್ತು ಮೂಲಸೌಕರ್ಯ ಗುರಿಯಾಗಿಸಿಕೊಂಡಿದ್ದ 20 ಡ್ರೋನ್ಗಳನ್ನು ರಷ್ಯಾ ಪಡೆಗಳು ಹೊಡೆದುರುಳಿಸಿವೆ. ಡಿ.14 ರಂದು ಸ್ಟಾಲ್ನಾಯ್ ಕಾನ್ ಟರ್ಮಿನಲ್ ಗುರಿಯಾಗಿಸಿ ಡ್ರೋನ್ ದಾಳಿ ನಡೆಸಲಾಗಿತ್ತು ಎಂದು ಉಕ್ರೇನ್ ಹೇಳಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.