ಕಳೆದ ಒಂಬತ್ತು ತಿಂಗಳಿಂದ ಹಿಡಿತ ಸಾಧಿಸಿದ್ದ ಕೆರ್ಸಾನ್ ಅನ್ನುರಷ್ಯಾ ಪಡೆಗಳು ಸ್ಫೋಟಕಗಳ ಅವಶೇಷಗಳ ತೊಟ್ಟಿಯನ್ನಾಗಿಸಿದ್ದವು. ಈ ನಗರದ ಮೇಲೆ ಉಕ್ರೇನ್ ಪಡೆಗಳು ಹಿಡಿತ ಸಾಧಿಸುತ್ತಿದ್ದು, ಮುನ್ನಡೆಯುತ್ತಿವೆ. ಕೆರ್ಸಾನ್ ಭಾಗದಲ್ಲಿ 40ಕ್ಕೂ ಹೆಚ್ಚು ಪಟ್ಟಣಗಳು ಮತ್ತು 41 ಜನವಸತಿ ಪ್ರದೇಶಗಳನ್ನು ರಷ್ಯಾ ಹಿಡಿತದಿಂದ ವಿಮೋಚನೆಗೊಳಿಸಿವೆ. ಹಲವು ಪ್ರದೇಶಗಳಲ್ಲಿ ಉಕ್ರೇನ್ ಧ್ವಜಗಳು ಪುನಃ ಹಾರಾಡುತ್ತಿವೆ. ಆಕ್ರಮಣಕಾರರ ವಿರುದ್ಧ ಜಯ ಸಾಧಿಸುವ ಸನಿಹದಲ್ಲಿದ್ದೇವೆ ಎಂದು ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಗುರುವಾರ ರಾತ್ರಿಯ ವಿಡಿಯೊ ಭಾಷಣದಲ್ಲಿ ಹೇಳಿದ್ದಾರೆ.