ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಫಾದಲ್ಲಿ ಇಸ್ರೇಲ್ ದಾಳಿಗೆ ಭಾರತದ ಅಧಿಕಾರಿ ಸಾವು: ಕ್ಷಮೆ ಕೋರಿದ ವಿಶ್ವಸಂಸ್ಥೆ

Published 15 ಮೇ 2024, 5:11 IST
Last Updated 15 ಮೇ 2024, 5:11 IST
ಅಕ್ಷರ ಗಾತ್ರ

‌ವಿಶ್ವಸಂಸ್ಥೆ: ಗಾಜಾದ ರಫಾದಲ್ಲಿ ಇಸ್ರೇಲ್ ಬಾಂಬ್‌ಗೆ ಬಲಿಯಾದ ಭಾರತ ಮೂಲದ ಅಧಿಕಾರಿಯ ಸಾವಿಗೆ ವಿಶ್ವಸಂಸ್ಥೆ ಸಂತಾಪ ಸೂಚಿಸಿದೆ. ಅಲ್ಲದೇ ಕ್ಷಮೆಯನ್ನೂ ಯಾಚಿಸಿದೆ.

ಭಾರತೀಯ ಸೇನೆಯ ನಿವೃತ್ತ ಅಧಿಕಾರಿ ಕರ್ನಲ್ ವೈಭವ್‌ ಅನಿಲ್ ಕಾಳೆ ಅವರು ವಿಶ್ವಸಂಸ್ಥೆಯ ಸುರಕ್ಷತೆ ಮತ್ತು ಭದ್ರತೆ ಇಲಾಖೆಯಲ್ಲಿ ಕಳೆದ ಎರಡು ತಿಂಗಳಿನಿಂದ ಭದ್ರತಾ ಸಮನ್ವಯ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ಸೋಮವಾರ ಬೆಳಿಗ್ಗೆ ಇವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಇಸ್ರೇಲ್ ದಾಳಿ ನಡೆಸಿತ್ತು. ಘಟನೆಯಲ್ಲಿ ಅನಿಲ್ ಕಾಳೆ ಮೃತಪಟ್ಟು, ಜೋರ್ಡನ್‌ ಮೂಲದ ಮತ್ತೊಬ್ಬ ಮಹಿಳಾ ಅಧಿಕಾರಿ ಗಾಯಗೊಂಡಿದ್ದರು. ಯುದ್ಧ ಪೀಡಿತ ರಫಾದಲ್ಲಿರುವ ಯೂರೋಪಿಯನ್ ಆಸ್ಪತ್ರೆಗೆ ಅವರು ಪ್ರಯಾಣಿಸುತ್ತಿದ್ದರು ಎಂದು ವಿಶ್ವಸಂಸ್ಥೆ ಹೇಳಿದೆ.

‘ಭಾರತದ ನಾಗರಿಕರಿಗೆ ಹಾಗೂ ಸರ್ಕಾರಕ್ಕೆ ನಾವು ನಮ್ಮ ಕ್ಷಮೆ ಹಾಗೂ ಸಂತಾಪಗಳನ್ನು ವ್ಯಕ್ತಪಡಿಸುತ್ತೇವೆ. ಭಾರತದ ಕೊಡುಗೆಯನ್ನು ನಾವು ಪ್ರಶಂಸಿಸುತ್ತೇವೆ’ ಎಂದು ವಿಶ್ವಸಂಸ್ಥೆಯ ಉಪವಕ್ತಾರ ಫರ್ಹಾನ್ ಹಕ್‌ ಹಾಗೂ ಪ್ರಧಾನ ಕಾರ್ಯದರ್ಶಿ ಅಂಟನಿಯೊ ಗುಟೆರಸ್‌ ದೈನಂದಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಘಟನೆ ಸಂಬಂಧ ಸತ್ಯಶೋಧನೆ ಸಮಿತಿಯನ್ನು ವಿಶ್ವಸಂಸ್ಥೆ ರಚಿಸಿದೆ. ಘಟನೆಯ ಬಗ್ಗೆ ಇಸ್ರೇಲಿ ಸೇನೆಯಿಂದ ಮಾಹಿತಿ ಪಡೆಯಲಾಗುತ್ತಿದೆ ಎಂದು ಫರ್ಹಾನ್ ತಿಳಿಸಿದ್ದಾರೆ.

ಕಾಳೆ 11ನೇ ಜಮ್ಮು ಮತ್ತು ಕಾಶ್ಮೀರ ರೈಫಲ್ಸ್‌ನ ಕಮಾಂಡರ್‌ ಆಗಿದ್ದರು. 2022ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT