ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

2023ರಲ್ಲಿ ಮಕ್ಕಳ ಮೇಲಿನ ಹಿಂಸಾಚಾರ ಅಧಿಕ: ವಿಶ್ವಸಂಸ್ಥೆ

Published 12 ಜೂನ್ 2024, 14:09 IST
Last Updated 12 ಜೂನ್ 2024, 14:09 IST
ಅಕ್ಷರ ಗಾತ್ರ

ವಿಶ್ವಸಂಸ್ಥೆ: ಮಕ್ಕಳ ಮೇಲಿನ ಹಿಂಸಾಚಾರ ಪ್ರಕರಣಗಳು 2023ರಲ್ಲಿ ಹಲವು ಪಟ್ಟು ಹೆಚ್ಚಾಗಿವೆ ಎಂದು ವಿಶ್ವಸಂಸ್ಥೆಯ ವರದಿಯೊಂದು ಹೇಳಿದೆ. 

ಇಸ್ರೇಲ್ ಮತ್ತು ಪ್ಯಾಲೇಸ್ಟಿನ್‌ ನಡುವಿನ ಸಂಘರ್ಷ, ರಷ್ಯಾ ಮತ್ತು ಉಕ್ರೇನ್‌ ನಡುವಿನ ಯುದ್ಧ ಸೇರಿದಂತೆ ಹಲವು ಸಂಘರ್ಷಗಳಲ್ಲಿ  ಮಕ್ಕಳ ಹತ್ಯೆಗಳು ನಡೆದಿವೆ. ಅಲ್ಲದೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಗಾಯಗೊಂಡಿದ್ದಾರೆ ಎಂದು ಹೇಳಿದೆ.

ಸಶಸ್ತ್ರ ಸಂಘರ್ಷದಲ್ಲಿ ಮಕ್ಕಳು ಕುರಿತ ವಾರ್ಷಿಕ ವರದಿ ಮಂಗಳವಾರ ಲಭ್ಯವಾಗಿದ್ದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿರುದ್ಧದ ಘರ್ಷಣೆಗಳ ಸರಣಿಯಲ್ಲಿ ಕಾಂಗೊ, ಬುರ್ಕಿನಾ ಫಾಸೊ, ಸೊಮಾಲಿಯಾ ಮತ್ತು ಸಿರಿಯಾ ಉಲ್ಲೇಖಿಸಿ ‘ಹಿಂಸಾಚಾರ ಪ್ರಕರಣಗಳು ಶೇ 21ರಷ್ಟು ಹೆಚ್ಚಳವಾಗಿವೆ’ ಎಂದು ತಿಳಿಸಿದೆ.   

ಇಸ್ರೇಲ್‌ ಪಡೆಗಳು ಶಾಲೆಗಳು ಮತ್ತು ಆಸ್ಪತ್ರೆಗಳ ಮೇಲೆ ದಾಳಿ ಮಾಡಿ, ಮಕ್ಕಳ ಹಕ್ಕುಗಳನ್ನು ಉಲ್ಲಂಘಿಸಿವೆ. ಮಕ್ಕಳನ್ನು ಕೊಲ್ಲುವುದು, ಗಾಯಗೊಳಿಸುವುದು ಮತ್ತು ಅಪಹರಣ ಮಾಡುವುದು ವ್ಯಾಪಕವಾಗಿ ನಡೆದಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT