ಪ್ಯಾರಿಸ್: ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆಯಾದ ಯುನೆಸ್ಕೊದ ಮುಖ್ಯಸ್ಥರನ್ನಾಗಿ ಈಜಿಪ್ಟ್ನ ಮಾಜಿ ಪ್ರವಾಸೋದ್ಯಮ ಸಚಿವ ಖಾಲೀದ್ ಎಲ್-ಎನಾನಿ ಅವರನ್ನು ಆಯ್ಕೆ ಮಾಡಲಾಗಿದೆ.

ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕವು ಎರಡನೇ ಬಾರಿಗೆ ಯುನೆಸ್ಕೊದಿಂದ ಹೊರಬಂದ ಕೆಲವೇ ತಿಂಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಕಾಂಗೋ ಗಣರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ 54 ವರ್ಷದ ಖಾಲೀದ್ ಅವರು 69 ವರ್ಷದ ಎಡ್ವರ್ಡ್ ಫಿರ್ಮಿನ್ ಮಟೊಕೊ ವಿರುದ್ಧ ಸ್ಪರ್ಧಿಸಿದ್ದರು.

ಯುನೆಸ್ಕೊ ಮಂಡಳಿಯು ಖಾಲೀದ್ ಅವರನ್ನು 55 ಮತಗಳೊಂದಿಗೆ ಆಯ್ಕೆ ಮಾಡಿದೆ. ಅಮೆರಿಕ ಮತದಾನದಿಂದ ದೂರ ಉಳಿಯಿತು. ಖಾಲೀದ್ ಆಯ್ಕೆ ಕುರಿತು ನವೆಂಬರ್ 6ರಂದು ಸದಸ್ಯರ ಅನುಮೋದನೆ ಪ್ರಕ್ರಿಯೆ ನಡೆಯಲಿದೆ ಎಂದು ವರದಿಯಾಗಿದೆ.

ವಿಶ್ವಸಂಸ್ಥೆಯ ಪ್ರಮುಖ ಅಂಗಸಂಸ್ಥೆಯಾದ ಯುನೆಸ್ಕೊದ ಮಹಾನಿರ್ದೇಶಕಿಯಾಗಿದ್ದ ಫ್ರಾನ್ಸ್ನ ಆಡ್ರೆ ಅಜೌಲೆ ಅವರ ನಾಲ್ಕು ವರ್ಷಗಳ ಅಧಿಕಾರಾವಧಿ ಈಚೆಗೆ ಪೂರ್ಣಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.