‘ಸಿರಿಯಾದ ವಾಯವ್ಯ ಭಾಗದಲ್ಲಿ ಸೆ.24ರಂದು ನಡೆಸಿದ ದಾಳಿಯಲ್ಲಿ ಹುರಾಸ್ ಅಲ್ ದೀನ್ ಸಂಘಟನೆಯ ಒಂಬತ್ತು ಉಗ್ರರು ಹಾಗೂ ಸೆ.16ರಂದು ಮಧ್ಯ ಸಿರಿಯಾದಲ್ಲಿ ನಡೆಸಿದ ದಾಳಿಯಲ್ಲಿ 28 ಉಗ್ರರು ಬಲಿಯಾಗಿದ್ದಾರೆ’ ಎಂದು ಅಮೆರಿಕ ಸೇನೆಯ ಮೂಲಗಳು ತಿಳಿಸಿವೆ.
ಸೆಷ್ಟೆಂಬರ್‌ನ 16 ಮತ್ತು 24ರಂದು ನಡೆಸಿದ ವೈಮಾನಿಕ ದಾಳಿಯಲ್ಲಿ ಯಾವುದೇ ನಾಗರಿಕರಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿಲ್ಲ ಎಂದು ಅಮೆರಿಕ ಪ್ರಕಟಣೆಯಲ್ಲಿ ತಿಳಿಸಿದೆ.