ವಾಷಿಂಗ್ಟನ್: ಸುಮಾರು 3,000 ಜನರನ್ನು ಬಲಿಪಡೆದ 2001ರಲ್ಲಿ ನಡೆದ 9/11ರ ಭಯೋತ್ಪಾದಕ ದಾಳಿಯ ಮಾಸ್ಟರ್ ಮೈಂಡ್ ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಈತನ ಸಹಚರರಾದ ಕುವೈತಿ– ಪಾಕಿಸ್ತಾನಿ ಎಂಜಿನಿಯರ್ ಮತ್ತು ಇತರ ಇಬ್ಬರು ಆರೋಪಿಗಳೊಂದಿಗೆ ಮಾಡಿಕೊಂಡಿದ್ದ ವಿಚಾರಣಾಪೂರ್ವ ಒಪ್ಪಂದವನ್ನು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ರದ್ದುಪಡಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಖಾಲಿದ್ ಶೇಖ್ ಮೊಹಮ್ಮದ್ ಮತ್ತು ಈತನ ಸಹಚರರೊಂದಿಗೆ ವಿಚಾರಣಾಪೂರ್ವ ಒಪ್ಪಂದವನ್ನು ಮಾಡಿಕೊಂಡಿರುವುದಾಗಿ ಗುರುವಾರ ಅಮೆರಿಕ ಘೋಷಿಸಿತ್ತು.

27 ತಿಂಗಳ ಮಾತುಕತೆಯ ಬಳಿಕ ಈ ಒಪ್ಪಂದ ಏರ್ಪಟ್ಟಿತ್ತು. ಇದರ ಪ್ರಕಾರ ಮೊಹಮ್ಮದ್ ಮತ್ತು ಇತರ ಆರೋಪಿಗಳಾದ ವಾಲಿದ್ ಬಿನ್, ಅತ್ತಾಶ್ ಮತ್ತು ಮುಸ್ತಫಾ ಹವ್ಸಾವಿ ಎಂಬುವವರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಹಿಂಪಡೆಯಲಾಗುವುದು ಎಂದು ರಕ್ಷಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿತ್ತು.

ಎಲ್ಲಾ ಆರೋಪಿಗಳು ಕಳೆದ 2 ದಶಕಗಳಿಂದ ಕ್ಯೂಬಾದ ಗ್ವಾಂಟನಮೊದಲ್ಲಿರುವ ಅಮೆರಿಕ ಸೇನೆಯ ಜೈಲಿನಲ್ಲಿದ್ದಾರೆ. ಆರೋಪಿಗಳು ಸಲ್ಲಿಸಿರುವ ತಪ್ಪೊಪ್ಪಿಗೆ ಅರ್ಜಿಯ ವಿಚಾರಣೆಯು ಮುಂದಿನ ವಾರದಿಂದ ಆರಂಭವಾಗಲಿದೆ.

2001ರ ಸೆಪ್ಟೆಂಬರ್ 11ರಂದು ಭಯೋತ್ಪಾದಕರಿಂದ ಅಪಹರಿಸಲಾದ ಎರಡು ಪ್ರಯಾಣಿಕ ವಿಮಾನಗಳು ನ್ಯೂಯಾರ್ಕ್ ನಗರದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಕಟ್ಟಡಗಳಿಗೆ ಡಿಕ್ಕಿ ಹೊಡೆದಿದ್ದವು. ಮೂರನೇ ವಿಮಾನವು ವಾಷಿಂಗ್ಟನ್‌ನಲ್ಲಿರುವ ಪೆಂಟಗನ್‌ಗೆ ಅಪ್ಪಳಿಸಿತ್ತು. ನಾಲ್ಕನೇ ವಿಮಾನದಲ್ಲಿದ್ದ ಪ್ರಯಾಣಿಕರು ಅಪಹರಣಕಾರರೊಂದಿಗೆ ಹೋರಾಡಿದ್ದರಿಂದ ಅದು ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.